ಶನಿವಾರ, ಮೇ 15, 2021
22 °C

ಸುಲಭ ಶೌಚಾಲಯ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಹುಬ್ಬಳ್ಳಿಯ ಯುರೇಕಾ ಟವರ್ಸ್‌ ಮುಂಭಾಗದ ಪಿಡಬ್ಲ್ಯಡಿ ಕಚೇರಿ ಬಳಿ 41.71 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಿಸಿದ ಅಂದಾಜು ರೂ 15 ಲಕ್ಷ ಮೊತ್ತದ ಸುಲಭ ಶೌಚಾ ಲಯವನ್ನು ಬುಧವಾರ ಉದ್ಘಾಟಿ ಲಾಯಿತು.ಮಾಜಿ ಮುಖ್ಯಮಂತ್ರಿ ಹಾಗೂ ಕ್ಷೇತ್ರದ ಶಾಸಕ ಜಗದೀಶ ಶೆಟ್ಟರ್ ಶೌಚಾಲಯವನ್ನು ಉದ್ಘಾಟಿಸಿದರು. ಪಾಲಿಕೆ ಸದಸ್ಯರಾದ ಲೀನಾ ಮಿಸ್ಕಿನ್, ವೀರಣ್ಣ ಸವಡಿ, ಬಿಜೆಪಿ ಮುಖಂಡ ನಾಗೇಶ ಕಲ್ಬುರ್ಗಿ, ಲಕ್ಷ್ಮಣ ಉಪ್ಪಾರ, ಪಾಲಿಕೆ ವಿಶೇಷಾಧಿಕಾರಿ ಎಚ್.ಎಸ್. ನರೇಗಲ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಬೆಂಗಳೂರಿನ ಸುಲಭ ಇಂಟರ ನ್ಯಾಶನಲ್ ಸೋಶಿಯಲ್ ಸರ್ವಿಸಸ್ ಸಂಸ್ಥೆಯ ಸಹಯೋಗದಲ್ಲಿ ಶೌಚಾಲ ಯವನ್ನು ನಿರ್ಮಿಸಲಾಗಿದೆ. ಇದರಲ್ಲಿ ಪುರುಷರ ಮೂರು ಮತ್ತು ಮಹಿಳೆ ಯರ ಎರಡು ಸ್ನಾನಗೃಹಗಳು ಇವೆ. ಪಾಲಿಕೆಯು ಈ ಯೋಜನೆಗೆ ಸಂಬಂಧಿಸಿ 20 ವರ್ಷ ಅವಧಿಯ ಒಪ್ಪಂದವನ್ನು ಸುಲಭ ಸಂಸ್ಥೆಯ ಜೊತೆ ಮಾಡಿಕೊಂಡಿದೆ. ಇಲ್ಲಿ ಸಾರ್ವಜನಿಕರಿಗೆ ಮೂತ್ರ ಮಾಡಲು ಯಾವುದೇ ಶುಲ್ಕ ವಿಲ್ಲ. ಸ್ನಾನಕ್ಕಾಗಿ ರೂ 4, ಶೌಚಕ್ಕಾಗಿ ರೂ 2 ದರ ನಿಗದಿ ಮಾಡಲಾಗಿದೆ ಎಂದು ಪಾಲಿಕೆಯ ಪ್ರಕಟಣೆ ತಿಳಿಸಿದೆ.ಉಚಿತ ಔಷಧಿಗೆ ಮನವಿ

ಹುಬ್ಬಳ್ಳಿ: ಹಿಮೊಫೀಲಿಯಾ ರೋಗಿ ಗಳಿಗೆ ಉಚಿತ ಔಷಧಿ ಒದಗಿಸಲು ಸರಕಾರವನ್ನು ಒತ್ತಾಯಿಸುವಂತೆ ಕೋರಿ ನಗರದ ಹಿಮೊಫೀಲಿಯಾ ಸೊಸೈಟಿ ಕಾರ್ಯಕರ್ತರು ಈಚೆಗೆ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಶಾಸಕರು ಈ ಸಂಬಂಧ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಸೊಸೈಟಿ  ಅಧ್ಯಕ್ಷ ಡಾ.ವಿ.ಡಿ.ಕರ್ಪೂರ ಮಠ, ಡಾ.ಕ್ರಾಂತಿಕಿರಣ, ಧರ್ಮ ಕುಮಾರ ಅಬ್ಬಯ್ಯ, ವಿಜಯ ಪರಾಂಡೆ, ರಾಜು ಕುಂದನಹಳ್ಳಿ, ಡಾ.ಉಮೇಶ ಹಳ್ಳಿಕೇರಿ, ಜಿ.ಉದಯ ಕುಮಾರ, ಗುರು ಕುಂದನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.