ಸೋಮವಾರ, ಆಗಸ್ಟ್ 2, 2021
21 °C

ಸುಲಿಗೆಕೋರನ ಬಂಧನ - ಕಾಡತೂಸು ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋರಮಂಗಲ ಮೂರನೇ ಬ್ಲಾಕ್‌ನ ಮನೆಯೊಂದರ ಮೇಲೆ ದಾಳಿ ನಡೆಸಿದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಕೀರ್ತನ್ ಅಲಿಯಾಸ್ ಕನ್ನಚಂಡ ಲೋಕೇಶ (34) ಎಂಬಾತನನ್ನು ಬಂಧಿಸಿ ಏಳು ಬುಲೆಟ್‌ಗಳು ಮತ್ತು 16 ಕಾಡತೂಸು ವಶಪಡಿಸಿಕೊಂಡಿದ್ದಾರೆ.ಕೀರ್ತನ್ ಸಹಚರರ ಜತೆ ಸೇರಿಕೊಂಡು ಕಟ್ಟಡ ಗುತ್ತಿಗೆದಾರ ಗೋವರ್ದನ್ ಎಂಬುವರಿಗೆ ಬೆದರಿಸಿ ಹಣ ಸುಲಿಗೆ ಮಾಡಿದ್ದ. ಈ ಸಂಬಂಧ ಬಾಣಸವಾಡಿ ಪೊಲೀಸರು ದೂರು ದಾಖಲಿಸಿಕೊಂಡು ಆತನ ಸಹಚರರಾದ ರಾಕೇಶ್, ಚೇತನ್, ದೀಪು ಸುಬ್ಬಯ್ಯ, ಗಣೇಶ ಮತ್ತು ಕಿಟ್ಟಿ ಎಂಬುವರನ್ನು ಹಿಂದೆಯೇ ಬಂಧಿಸಿ್ದದರು.ಆದರೆ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಕೀರ್ತನ್‌ನ ಬಂಧನಕ್ಕೆ ನ್ಯಾಯಾಲಯ ವಾರೆಂಟ್ ಜಾರಿ ಮಾಡಿತ್ತು.ಮಡಿಕೇರಿ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿ ಕೀರ್ತನ್‌ನ ಹೆಸರಿತ್ತು. ಅಲ್ಲದೇ ಆತನ ವಿರುದ್ಧ ಮಡಿಕೇರಿ ಠಾಣೆಯಲ್ಲಿ ಮೂರು ಕೊಲೆ ಯತ್ನ ಪ್ರಕರಣಗಳು ಹಾಗೂ ಪೆಟ್ರೋಲ್ ಕಳವು ಮಾಡಿದ ಸಂಬಂಧ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದ್ದವು.ಪತ್ರಿಕಾ ಛಾಯಾಗ್ರಾಹಕನ ದರೋಡೆ

‘ಪ್ರಜಾವಾಣಿ’ ಪತ್ರಿಕೆಯ ಛಾಯಾಗ್ರಾಹಕ ಬಿ.ಕೆ.ಜನಾರ್ದನ್ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಮೊಬೈಲ್ ಫೋನ್ ದರೋಡೆ ಮಾಡಿದ ಘಟನೆ ಸಂಜಯನಗರ ಸಮೀಪದ ನಾಗಶೆಟ್ಟಿಹಳ್ಳಿ ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.ಅವರು ಪತ್ನಿ ಮತ್ತು ಮಗುವನ್ನು ಕರೆದುಕೊಂಡು ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.  ಐದು ಮಂದಿ ಕಿಡಿಗೇಡಿಗಳು ಜನಾರ್ದನ್ ಅವರ ವಾಹನವನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಸುಮಾರು 15 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಫೋನ್ ಕಿತ್ತುಕೊಂಡು ಆಟೊದಲ್ಲಿ ಪರಾರಿಯಾಗಿದ್ದಾರೆ.ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಸಂಜಯನಗರ ಪೊಲೀಸರು ತಿಳಿಸಿದ್ದಾರೆ.ಮಚ್ಚಿನಿಂದ ಹಲ್ಲೆ

ದುಷ್ಕರ್ಮಿಗಳು ಪದಂಸಿಂಗ್ ಎಂಬುವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಹಲಸೂರಿನ ಅಣ್ಣಯ್ಯಪ್ಪರೆಡ್ಡಿ ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಸಿಂಗ್ ಅವರು ನಗರ್ತಪೇಟೆಯ ಟ್ರಾನ್ಸ್‌ಪೋರ್ಟ್ ಕಂಪೆನಿಯೊಂದರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿ್ದದರು. ಕೆಲ ದಿನಗಳಿಂದ ಅವರು ಕೆಲಸಕ್ಕೆ ಹೋಗುತ್ತಿರಲಿಲ್ಲ.ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಅವರ ಮನೆಗೆ ಬಂದ ದುಷ್ಕರ್ಮಿಗಳು ಬಾಗಿಲು ತಟ್ಟಿದ್ದಾರೆ. ಸಿಂಗ್ ಅವರು ಬಾಗಿಲು ತೆರೆದಾಗ ಒಳ ನುಗ್ಗಿದ ಕಿಡಿಗೇಡಿಗಳು ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.