ಸುಲಿಗೆಗೆ ಕಡಿವಾಣ ಹಾಕಿ

7

ಸುಲಿಗೆಗೆ ಕಡಿವಾಣ ಹಾಕಿ

Published:
Updated:

ರಾಜ್ಯದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ `ರೆಸಾರ್ಟ್~ ಮತ್ತು `ಹೋಂ ಸ್ಟೇ~ಗಳಿಗೆ ಕಡಿವಾಣ ಹಾಕಲು ಸರ್ಕಾರ ಚಿಂತಿಸುತ್ತಿದೆ ಎಂಬ (ಪ್ರ ವಾ ಮೇ14) ವರದಿ ಓದಿ ಸಂತೋಷವಾಯಿತು.



ಮಲೆನಾಡಿನಲ್ಲಿ ಕೆಲವು  `ಹೋಂ ಸ್ಟೇ~ಗಳು ಅಕ್ಷರಶಃ ಬಾರ್‌ಗಳಾಗಿವೆ. `ರೆಸಾರ್ಟ್~ಗಳಲ್ಲಂತೂ ಕೇಳುವ ಹಾಗಿಲ್ಲ. ಮೋಜು ಮಾಡಲು ಬರುವ ನಗರವಾಸಿಗಳನ್ನು ಅವು ಸುಲಿಗೆ ಮಾಡುತ್ತವೆ.



`ರೆಸಾರ್ಟ್~ ಮತ್ತು `ಹೋಂ ಸ್ಟೇ~ಗಳಿಂದ ಅವುಗಳ ಸುತ್ತಲಿನ ಜನರ ನೆಮ್ಮದಿ ಹಾಳಾಗಿದೆ. ಅವುಗಳಲ್ಲಿ ನಡೆಯುವ  ಚಟುವಟಿಕೆಗಳನ್ನು ಸರ್ಕಾರ ಇದುವರೆಗೆ ಗಮನಿಸದೇ ಇದ್ದದ್ದು ಅಕ್ಷಮ್ಯ. ಇನ್ನಾದರೂ ಸರ್ಕಾರ ಅವುಗಳನ್ನು  ನಿಯಂತ್ರಿಸಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry