ಗುರುವಾರ , ಮೇ 13, 2021
17 °C

ಸುಳ್ಯ: ಒಳಚರಂಡಿ ಕಾಮಗಾರಿ ಮತ್ತೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಳ್ಯ: ಇಲ್ಲಿನ ಶಾಸಕರ ನೇತೃತ್ವದಲ್ಲಿ ನಡೆದ `ಗೌಪ್ಯ~ ಸಭೆಯ ನಿರ್ಣಯವನ್ನು ತುರ್ತಾಗಿ ಜಾರಿಗೆ ತಂದು ರಾಜ್ಯ ಹೆದ್ದಾರಿಯನ್ನು 40 ದಿನ ಬಂದ್ ಮಾಡಿ ಜಿಲ್ಲಾಡಳಿತ ಹೊರಡಿಸಿದ ಅಧಿಸೂಚನೆಯನ್ನು ಈಗಲೂ ಹಿಂದಕ್ಕೆ ಪಡೆದಿಲ್ಲ. ಹೀಗಿದ್ದರೂ ಹೆದ್ದಾರಿ ಮಾತ್ರ ಎಂದಿನಂತೆ ಸಂಚಾರಕ್ಕೆ ಮುಕ್ತವಾಗಿದೆ.ಗುರುವಾರ ತಹಸೀಲ್ದಾರ್ ನೇತೃತ್ವದಲ್ಲಿ ನಡೆದ ಸಾರ್ವಜನಿಕರ ಹಾಗೂ ಅಧಿಕಾರಿಗಳ ಸಭೆಯಲ್ಲಿ ರಸ್ತೆ ಅಭಿವೃದ್ಧಿ ಮತ್ತು ಒಳಚರಂಡಿ ಕಾಮಗಾರಿ ರಸ್ತೆಯ ಒಂದು ಬದಿ ಮೊದಲು ನಡೆದು ಬಳಿಕ ಇನ್ನೊಂದು ಬದಿ ನಡೆಸುವುದು ಹಾಗೂ ರಾಜ್ಯ ಹೆದ್ದಾರಿಯನ್ನು ಯಾವತ್ತೂ ಬಂದ್ ಮಾಡುವುದು ಬೇಡ ಎಂದು ನಿರ್ಣಯಿಸಲಾಗಿತ್ತು. ಆ ನಿರ್ಣಯವನ್ನು ತಹಸೀಲ್ದಾರ್ ಅವರು ಜಿಲ್ಲಾಧಿಕಾರಿಗೂ ವರದಿ ಮಾಡಿದ್ದರು. ಅದರಂತೆ ಪಟ್ಟಣದ ಒಳಚರಂಡಿ ಕಾಮಗಾರಿ ಮತ್ತೆ ಆರಂಭವಾಗಿದೆ.ಈ ಮಧ್ಯೆ ತಾವು ಹೊರಡಿಸಿದ ಅಧಿಸೂಚನೆಯನ್ನು ಹಿಂದಕ್ಕೆ ಪಡೆಯದಿರಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ತಿಳಿದುಬಂದಿದೆ.ಮಂಗಳೂರು ಮತ್ತು ಮಡಿಕೇರಿ ಮಧ್ಯೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಸ್ಥಗಿತ ಮಾಡುವಂತೆ ಜಿಲ್ಲಾಡಳಿತ ಆದೇಶ ನೀಡಿದ್ದರೂ ತಹಸೀಲ್ದಾರ್ ಮನವಿ ಮೇರೆಗೆ ಬಸ್‌ಗಳ ಓಡಾಟ ಯಥಾಸ್ಥಿತಿಯಲ್ಲಿ  ಮುಂದುವರಿದಿದೆ.ಹೆದ್ದಾರಿಯನ್ನು ಬಂದ್ ಮಾಡಿದರೆ ಸ್ಥಳೀಯ ಜನತೆಗಿಂತ ದೂರದ ಊರುಗಳಿಗೆ ತೆರಳುವವರಿಗೆ ಹೆಚ್ಚಿನ ತೊಂದರೆ ಆಗುತ್ತದೆ ಎಂಬ ಅಂಶವನ್ನು ಜಿಲ್ಲಾಡಳಿತ ಗಣನೆಗೆ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಅಧಿಸೂಚನೆ ಇತ್ತಡಗಳಿಗೂ `ಪ್ರತಿಷ್ಠೆ~ಯ ವಿಷಯವಾಗಿದ್ದಂತೆ ತೋರುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.