ಶನಿವಾರ, ಜನವರಿ 18, 2020
20 °C

ಸುಳ್ಳು ಜಾತಿ ಪ್ರಮಾಣಪತ್ರ ವಿತರಣೆ: ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹೈ.ಕ ಕುರುಬ ಜಾತಿಯವ ರಿಗೆ ಕಾನೂನು ಬಾಹಿರವಾಗಿ ಗೊಂಡ, ಕಾರುಕುರುಬ, ಜೇನು ಕುರುಬ, ರಾಜಗೊಂಡ ಎಂದು ಸುಳ್ಳು ಪರಿಶಿಷ್ಟ ಪಂಗಡ ಪ್ರಮಾಣಪತ್ರ ವಿತರಿಸ ಲಾಗುತ್ತಿದೆ ಎಂದು ಆರೋಪಿಸಿ ಗುಲ್ಬರ್ಗ ಜಿಲ್ಲಾ ವಾಲ್ಮೀಕಿ ನಾಯಕರ ಸಂಘದ ಸದಸ್ಯರು ಜಗತ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಯಾವುದೇ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವ ಮೊದಲು ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ ಅಧಿಕಾರಿಗಳು ಸ್ಥಳೀಯರ ಹೇಳಿಕೆ ಪಡೆದುಕೊಂಡು ತಹಶೀಲ್ದಾ ರರಿಗೆ ಶಿಫಾರಸು ಮಾಡಬೇಕು ಎಂದು ಸರ್ಕಾರದ ಆದೇಶಿಸಿದೆ. ಆದರೆ ರಾಜಕೀಯ ಒತ್ತಡದಲ್ಲಿ ಕೆಲಸ ಮಾಡುತ್ತಿರುವ ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕ ಅಧಿಕಾರಿಗಳು ಕುಳಿತಲ್ಲೇ ಸುಳ್ಳು ಶಿಫಾರಸು ಪತ್ರ ನೀಡುತ್ತಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.ಚಿಂಚೋಳಿ ತಾಲ್ಲೂಕಿನಲ್ಲಿ ಈಗಾಗಲೇ 200 ಸುಳ್ಳು ಜಾತಿ ಪ್ರಮಾಣಪತ್ರ ವಿತರಿಸಲಾಗಿದ್ದು, ಕೂಡಲೇ ಈ ಪ್ರಮಾಣಪತ್ರಗಳನ್ನು ರದ್ದುಗೊಳಿಸಿ ತಾಲ್ಲೂಕು ತಹಸೀ ಲ್ದಾರ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಕ್ರಮ ಕೈಗೊಳ್ಳದಿದ್ದರೆ ರಾಜ್ಯದಾದ್ಯಂತ ಹೋರಾಟ ಆರಂಭಿಸಲಾಗುವುದು ಎಂದು ತಿಳಿಸಲಾಗಿದೆ.ಶಿವಾಜಿ ಸಿತಾಳಗಿರೆ, ಮರೆಪ್ಪ ಮಗ್ದಂಪುರ, ಸೀತಾರಾಮ ಸುಬೇದಾರ, ಮಾರುತಿ ಜಮಾದಾರ, ಮಹೇಂದ್ರಕುಮಾರ ವಾಡಿ, ವಿರೇಶ ಸುಬೇದಾರ, ಶಿವಕುಮಾರ ದೊರೆ, ದೇವೀಂದ್ರಪ್ಪ ನಾಯಿಕೊಡಿ, ಮಹೇಶ ಉಡಗಿ ಇತರರು ಇದ್ದರು.

ಪ್ರತಿಕ್ರಿಯಿಸಿ (+)