ಬುಧವಾರ, ಜೂನ್ 16, 2021
27 °C
ಹಾಗರಗಾ: ನವೋದಯ ಶಾಲೆಯ ಜಮೀನು ವಿವಾದ

ಸುಳ್ಳು ಹೇಳಿಕೆ: ಗ್ರಾಮಸ್ಥರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ತಾಲ್ಲೂಕಿನ ಹಾಗರಗಾ ಗ್ರಾಮದ ಸರ್ವೆ ನಂ.315ರಲ್ಲಿ ನವೋದಯ ಶಾಲೆಗೆ ಸಂಬಂಧಿಸಿದ ಜಮೀನ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಖಮುರಲ್‌ ಇಸ್ಲಾಂ ಪರವಾಗಿ ಉತ್ತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ ಅಸಗರ ಚುಲಬುಲ್‌ ಮತ್ತು ಪ್ರಧಾನ ಕಾರ್ಯದರ್ಶಿ ಭೀಮರೆಡ್ಡಿ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ಗ್ರಾಮದ ನಾಗರಿಕ ಹಿತರಕ್ಷಣ ಸಮಿತಿ ಸದಸ್ಯರು ಆರೋಪಿಸಿದ್ದಾರೆ.ಗ್ರಾಮದ ಸುತ್ತಮುತ್ತಲಿನ ವಿದ್ಯಾ ರ್ಥಿಗಳಿಗೆ ಅನುಕೂಲಕ್ಕಾಗಿ ಗ್ರಾಮಸ್ಥರು ಜಮೀನು ನೀಡಿದ್ದಾರೆ. ಆದರೆ ಸಚಿವರು ಬೇರೆ ಉದ್ದೇಶಕ್ಕೆ ಉಪಯೋಗಿಸಿಕೊ ಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಚುಲಬುಲ್ ಅವರು ನೀಡಿರುವ ಹೇಳಿಕೆಯನ್ನು ವಾಪಸ್ಸು ಪಡೆಯಬೇಕು. ಗ್ರಾಮಸ್ಥರ ಕ್ಷಮೆ ಕೇಳಬೇಕು ಎಂದು ಸಮಿತಿ ಅಧ್ಯಕ್ಷ ಶಿವಕುಮಾರ ಜಿ. ಮಠಪತಿ, ಉಪಾಧ್ಯಕ್ಷ ಪ್ರಕಾಶ ಎಸ್‌. ಹಾಗರಗಿ, ಮಹಾ ಪ್ರಧಾನ ಕಾರ್ಯ ದರ್ಶಿ ಲಕ್ಷ್ಮಣ ಎಸ್‌,ಕೋರಿ, ಸಹ ಕಾರ್ಯದರ್ಶಿ ಧರ್ಮಸಿಂಗ ತಿವಾರಿ, ಬಹುಜನ ಜಾಗೃತಿ ವೇದಿಕೆ ತಾಲ್ಲೂಕು ಅಧ್ಯಕ್ಷ ರವಿ.ಆರ್‌.ಕೋರಿ ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.