ಸುವರ್ಣದಲ್ಲಿ ಗಣೇಶ

7

ಸುವರ್ಣದಲ್ಲಿ ಗಣೇಶ

Published:
Updated:
ಸುವರ್ಣದಲ್ಲಿ ಗಣೇಶ

ಸುವರ್ಣ ವಾಹಿನಿ ಗುರುವಾರ ಗಣೇಶ ಹಬ್ಬದಂದು ಮನರಂಜನೆಯ ದೊಡ್ಡ ಬುತ್ತಿಯನ್ನೇ ವೀಕ್ಷಕರ ಮುಂದಿಡುತ್ತಿದೆ.

 

ಮಧ್ಯಾಹ್ನ 1ರ  `ಬೊಂಬಾಟ್ ಭೋಜನ~ದ ವಿಶೇಷ ಸಂಚಿಕೆಯಲ್ಲಿ ಸಿಹಿಕಹಿ ಚಂದ್ರು ಅವರು ಗೌರಿ ಮತ್ತು ಗಣೇಶ ಹಬ್ಬದ ವಿಶಿಷ್ಟ ಖಾದ್ಯ ತಯಾರಿಸಿ ವೀಕ್ಷಕರ ಮುಂದಿಡಲಿದ್ದಾರೆ.ರಾತ್ರಿ 8ಕ್ಕೆ ನೋಡಿ `ಸ್ವಾಮಿ ನಾವಿರೋದೇ ಹೀಗೆ~ಯಲ್ಲಿ ಧಡೂತಿ ಕಾಯದವರು ಗಣೇಶ ಚತುರ್ಥಿಯನ್ನು ವಿಭಿನ್ನವಾಗಿ ಆಚರಿಸಲಿದ್ದಾರೆ. ಅಕ್ಕ-ಪಕ್ಕದ ಸಂತೆ ಬೀದಿಗಳಿಂದ ಚಂದಾ ಸಂಗ್ರಹಿಸಿ ದೊಡ್ಡ ಗಣಪನನ್ನು ಪ್ರತಿಷ್ಠಾಪಿಸಲಿದ್ದಾರೆ.`ಪಡುವಾರಳಿ ಪಡ್ಡೆಗಳು~ ರಾತ್ರಿ 10.30ಕ್ಕೆ ಎರಡು ವಿಶೇಷ ಪಾತ್ರಗಳಲ್ಲಿ ಗಣೇಶ ಮತ್ತವನ ಇಲಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry