ಶುಕ್ರವಾರ, ನವೆಂಬರ್ 15, 2019
21 °C

ಸುವರ್ಣದ ರಿಯಾಲಿಟಿ ಶೊ ಸೂಪರ್ ಮ್ಯೂಸಿಕ್ ಸ್ಟಾರ್ಸ್‌

Published:
Updated:

ಮನರಂಜನೆ ಮತ್ತು ಸೃಜನಶೀಲ ಕ್ರಿಯಾಶೀಲತೆಯಲ್ಲಿತೊಡಗಿಸಿಕೊಂಡಿರುವ ಸುವರ್ಣ ವಾಹಿನಿ ಈಗ ಮತ್ತೊಂದು ಹೊಸ ಸಂಗೀತ ಆಧಾರಿತ ರಿಯಾಲಿಟಿ ಶೊ `ಸೂಪರ್ ಸ್ಟಾರ್ಸ್‌~ ಆರಂಭಿಸಿದೆ.

ಇದು ಸ್ಪರ್ಧಿಗಳ ಮಧ್ಯೆ ಪೈಪೋಟಿಯೇ ಮುಖ್ಯ ಎನ್ನುವ ರೀತಿಯ ರಿಯಾಲಿಟಿ ಶೋ ಅಲ್ಲ. ಈಗಾಗಲೇ ಜನಪ್ರಿಯ ಮ್ಯೂಸಿಕಲ್ ರಿಯಾಲಿಟಿ ಶೊಗಳಲ್ಲಿ ಖ್ಯಾತಿ ಪಡೆದ 12 ಹಾಡುಗಾರರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಮುಂದಿನ ಸೂಪರ್ ಗಾಯಕರಾಗಿ ಸೆಲಬ್ರಿಟಿ ಸ್ಥಾನಕ್ಕೇರಲು ಇಲ್ಲಿ ಪ್ರತಿಯೊಬ್ಬರಿಗೂ ತರಬೇತಿ ನೀಡಲಾಗುತ್ತದೆ.

ಇದಕ್ಕಾಗಿ ಇವರನ್ನು 40 ದಿನ ಪ್ರಶಾಂತ ಗುರುಕುಲದಲ್ಲಿ ಇಡಲಾಗುವುದು.ಈ ಅವಧಿಯಲ್ಲಿ ಇವರಿಗೆ ಹಾಡೇ ಜಗತ್ತು, ಜೀವ, ಸರ್ವಸ್ವವಾಗಿರುತ್ತದೆ. ಇಲ್ಲಿ ಧ್ವನಿ ಶುದ್ಧತೆ, ರಾಗಾಲಾಪ, ಶಬ್ದ ಗ್ರಹಣ, ಹಾಡಿನ ಬೇರೆ ಬೇರೆ ಮಜಲುಗಳೊಂದಿಗೆ, ನೃತ್ಯದ ಪರಿಕಲ್ಪನೆ, ಮಾಧ್ಯಮದ ಅರಿವು ಕುರಿತಂತೆ ಪರಿಣಿತರಿಂದ ತರಬೇತಿ ಸಿಗಲಿದೆ.

ಈ ಶೊದಲ್ಲಿ ಮಾರ್ಗದರ್ಶಕರಾಗಿ ಗಾಯಕ ರಾಜೇಶ್ ಕೃಷ್ಣನ್  ಹಾಗೂ ನೃತ್ಯ ಕಲಾವಿದೆ  ಲಕ್ಷ್ಮಿ ಗೋಪಾಲಸ್ವಾಮಿ  ಭಾಗವಹಿಸಲಿದ್ದಾರೆ. ಪ್ರವೀಣ್ ಮತ್ತು ಐಶ್ವರ್ಯ ನಿರೂಪಕರು.

ಮ್ಯೂಸಿಕ್ ಸೂಪರ್ ಸ್ಟಾರ್ಸ್ ಪ್ರತಿ ಸೋಮವಾರದಿಂದ ಶುಕ್ರವಾರ ವರೆಗೆ ರಾತ್ರಿ 8ಕ್ಕೆ ಪ್ರಸಾರವಾಗಲಿದೆ.

ಪ್ರತಿಕ್ರಿಯಿಸಿ (+)