ಸುವರ್ಣಭೂಮಿ: 4ರಂದು ಲಾಟರಿ

ಬುಧವಾರ, ಜೂಲೈ 17, 2019
25 °C

ಸುವರ್ಣಭೂಮಿ: 4ರಂದು ಲಾಟರಿ

Published:
Updated:

ಕೂಡ್ಲಿಗಿ: 2011-12ನೇ ಸಾಲಿನ ಸುವರ್ಣಭೂಮಿ ಯೋಜನೆಯಲ್ಲಿ ಸಹಾಯಧನವನ್ನು ಪಡೆಯಲು ತಾಲ್ಲೂಕಿನಲ್ಲಿ ರೈತರು ಅರ್ಜಿ ಸಲ್ಲಿಸಿದ್ದು, ಚಟುವಟಿಕೆವಾರು ನಿಗದಿ ಪಡಿಸಿದ ಗುರಿಗಿಂತ ಹೆಚ್ಚಿನ ಅರ್ಜಿಗಳು ಬಂದಲ್ಲಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಾಗಿರುವುದರಿಂದ ಜೂನ್ 4ರಂದು ಲಾಟರಿ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆ ಆರಂಭ ಗೊಳ್ಳಲಿದೆ ಎಂದು ತಾಲ್ಲೂಕು ಕೃಷಿ ಇಲಾಖೆಯ ಅಧಿಕಾರಿ ಕೆ.ಎಂ.ಚನ್ನ ಬಸಯ್ಯ ತಿಳಿಸಿದ್ದಾರೆ.ಈ ಮೊದಲು ಲಾಟರಿ ತೆಗೆಯುವ ಪ್ರಕ್ರಿಯೆ ಮೇ 25ರಿಂದ ಇದ್ದದ್ದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಚುನಾ ವಣೆ ಪ್ರಯುಕ್ತ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ದಿನಾಂಕವನ್ನು ಮುಂದೂಡಲಾಗಿತ್ತು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ತಾಲ್ಲೂಕಿನಲ್ಲಿ ಜೂನ್ 4ರಂದು ಲಾಟರಿ ಪ್ರಕ್ರಿಯೆಯನ್ನು ನಡೆಸಲಾಗು ವುದು. ಅದೇ ದಿನದಂದೇ ಲಾಟರಿ ಮೂಲಕ ಆಯ್ಕೆಯಾದ ಫಲಾನುಭವಿ ಗಳ ಪಟ್ಟಿಯನ್ನು ಪ್ರಕಟಿಸಲಾಗುವುದು. ತಾಲ್ಲೂಕಿನಲ್ಲಿ 4 ಹೋಬಳಿಗಳಲ್ಲಿ ಲಾಟರಿ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಕೂಡ್ಲಿಗಿ ಯಲ್ಲಿ ಚಂದ್ರಶೇಖರ ಆಜಾದ್ ಮೈದಾನ, ಕೊಟ್ಟೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಹೊಸ ಹಳ್ಳಿಯಲ್ಲಿ ಹಿರಿಯ ಪ್ರಾಥಮಿಕ ಶಾಲೆ, ಗುಡೇ ಕೋಟೆಯಲ್ಲಿ ಪ್ರವಾಸಿ ಮಂದಿರದ ಬಳಿ ಲಾಟರಿ ಎತ್ತುವ ಪ್ರಕ್ರಿಯೆ ನಡೆಸಲಾಗುವುದು.ಇದರ ಮೇಲ್ವಿಚಾರಕರಾಗಿ ಕೂಡ್ಲಿಗಿಗೆ ಜಿ.ಪಂ ಇಂಜಿನಿಯರಿಂಗ್ ವಿಭಾಗದ ಅಧಿಕಾರಿ ಈರಪ್ಪ, ಕೊಟ್ಟೂ ರಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ಎಂ. ಮಂಜುನಾಥ ಸ್ವಾಮಿ, ಹೊಸ ಹಳ್ಳಿಗೆ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿವಪ್ಪ ಡಂಬಳ, ಗುಡೇಕೋಟೆಗೆ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶ್ರೀನಿವಾಸ್‌ರನ್ನು ನೇಮಿಸಲಾಗಿದೆ.ಸುವರ್ಣಭೂಮಿ ಯೋಜನೆಗಾಗಿ ತಾಲ್ಲೂಕಿನಾದ್ಯಂತ ಸ್ವೀಕರಿಸಲಾದ ಅರ್ಜಿ ಗಳ ಸಂಖ್ಯೆ ಒಟ್ಟು 12,694. ಆಯ್ಕೆ ಮಾಡಬೇಕಾಗಿರುವ ಫಲಾನುಭವಿಗಳ ಸಂಖ್ಯೆ 2,494. ಹೋಬಳಿಗಳಲ್ಲಿ    ಸ್ವೀಕರಿಸಲ್ಪಟ್ಟ ಅರ್ಜಿಗಳ ವಿವರ. ಕೂಡ್ಲಿಗಿ ಯಲ್ಲಿ ಸ್ವೀಕರಿಸಿದ ಅರ್ಜಿಗಳು ಒಟ್ಟು 2,320. ಆಯ್ಕೆ ಮಾಡಬೇಕಾದ ಫಲಾ ನುಭವಿಗಳ ಸಂಖ್ಯೆ 471. ಕೊಟ್ಟೂರಿನಲ್ಲಿ ಸ್ವೀಕರಿಸಿದ ಅರ್ಜಿಗಳು ಒಟ್ಟು 4,057. ಆಯ್ಕೆ ಮಾಡ ಬೇಕಾದ ಫಲಾನುಭವಿ ಗಳ ಸಂಖ್ಯೆ 778. ಗುಡೇಕೋಟೆಯಲ್ಲಿ ಸ್ವೀಕರಿಸಲಾದ ಅರ್ಜಿಗಳು ಒಟ್ಟು 2,358. ಆಯ್ಕೆ ಮಾಡಬೇಕಾದ ಫಲಾ ನುಭವಿಗಳ ಸಂಖ್ಯೆ 497. ಹೊಸಹಳ್ಳಿ ಯಲ್ಲಿ ಸ್ವೀಕರಿಸಿದ ಅರ್ಜಿಗಳು ಒಟ್ಟು 3,959. ಆಯ್ಕೆ ಮಾಡಬೇಕಾದ ಫಲಾ ನುಭವಿಗಳ ಸಂಖ್ಯೆ 748 ಎಂದು ಕೃಷಿ ಇಲಾಖೆಯ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry