ಮಂಗಳವಾರ, ಏಪ್ರಿಲ್ 13, 2021
29 °C

ಸುವರ್ಣ ಗ್ರಾಮೋದಯಕ್ಕೆ 74 ಗ್ರಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಜಿಲ್ಲೆಯ ಏಳು ತಾಲ್ಲೂಕುಗಳ 74 ಗ್ರಾಮಗಳನ್ನು, 2012-13ನೇ ಸಾಲಿನ ಸುವರ್ಣ ಗ್ರಾಮೋದಯ ಯೋಜನೆಯಡಿ ಅಭಿವೃದ್ಧಿ ಪಡಿಸಲು ಸರ್ಕಾರ ಆಯ್ಕೆ ಮಾಡಿ, ಆದೇಶ ಹೊರಡಿಸಿದೆ.ಕೃಷ್ಣರಾಜಪೇಟೆ ತಾಲ್ಲೂಕಿನ 24 ಗ್ರಾಮಗಳು, ಮದ್ದೂರು -9, ಮಳವಳ್ಳಿ -5, ಮಂಡ್ಯ -12, ನಾಗಮಂಗಲ -13, ಪಾಂಡವಪುರ -5 ಹಾಗೂ ಶ್ರೀರಂಗಪಟ್ಟಣದಿಂದ-6 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ.ಯೋಜನೆ ಪ್ರಕಾರ, ಪ್ರತಿ ಗ್ರಾಮವನ್ನು ರೂ. 1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಬೇಕಿದ್ದರೂ, ಗ್ರಾಮದ ಜನಸಂಖ್ಯೆಗೆ ಹಾಗೂ ತಲಾನುದಾನ ನಿಯಮಕ್ಕೆ ತಕ್ಕಂತೆ ಗ್ರಾಮಗಳಿಗೆ ಅನುದಾನ ನಿಗದಿಪಡಿಸಲಾಗಿದೆ.ಆಯ್ಕೆಯಾದ ಗ್ರಾಮಗಳ ವಿವರ (ಆವರಣದಲ್ಲಿರುವುದು ನಿಗದಿಪಡಿಸಿರುವ ಅನುದಾನ ಲಕ್ಷಗಳಲ್ಲಿ).

ಕೃಷ್ಣರಾಜಪೇಟೆ ತಾಲ್ಲೂಕು:

ದೊಡ್ಡತಾರಹಳ್ಳಿ (ರೂ. 35.68), ಆನೆಗೊಳ (ರೂ. 27.23), ಮರುವನಹಳ್ಳಿ (ರೂ. 16.09), ಉಯಿಗೋನಹಳ್ಳಿ (ರೂ. 12.01), ಅಗ್ರಹಾರಬಾಚಹಳ್ಳಿ (ರೂ. 48.09), ಹೆಮ್ಮನಹಳ್ಳಿ (ರೂ. 26.80), ಚಟ್ಟಂಗೆರೆ (ರೂ. 30.60), ಕೋಡಿಹಳ್ಳಿ (ರೂ. 11.46), ಮಾವಿನಕೆರೆ (ರೂ. 36.53), ದೊಡ್ಡಗಾಡಿಗನಹಳ್ಳಿ (ರೂ. 36.13), ಮತ್ತೀಕೆರೆ (ರೂ. 13.81), ಮಾಚಗೋನಹಳ್ಳಿ (ರೂ. 19.39), ಹರಳಹಳ್ಳಿ (ರೂ. 27.80), ಮೈಲನಹಳ್ಳಿ (ರೂ. 17.02), ಸಾರಂಗಿ (ರೂ. 36.61), ಜಾಗಿನಕೆರೆ (ರೂ. 25.90), ಕುಂದೂರು (ರೂ. 34.41), ಕೊರಟಿಗೆರೆ (ರೂ. 30.53), ಆಲೇನಹಳ್ಳಿ (ರೂ. 34.91),  ಹೊನ್ನೇನಹಳ್ಳಿ (ರೂ. 24.85), ಚೋಕನಹಳ್ಳಿ (ರೂ. 18.54), ಬೊಮ್ಮಲಾಪುರ (ರೂ. 13.24),  ಬಳ್ಳೇಕೆರೆ (ರೂ. 31.78), ಐಕನಹಳ್ಳಿ (ರೂ. 37.58). ಒಟ್ಟು ರೂ. 647 ಲಕ್ಷ.ಮದ್ದೂರು ತಾಲ್ಲೂಕು: ದುಂಡನಹಳ್ಳಿ (ರೂ. 65.51), ಚಾಮನಹಳ್ಳಿ (ರೂ. 114.07), ಎಸ್.ಐ.ಹಾಗಲಹಳ್ಳಿ (ರೂ. 85.49), ಗೆಜ್ಜಲಗೆರೆ (ರೂ. 89.06), ಎಸ್.ಐ.ಹೊನ್ನಲಗೆರೆ (ರೂ. 54.65), ಮೆಳ್ಳಹಳ್ಳಿ (ರೂ. 147.35), ಬಿದರಹೊಸಹಳ್ಳಿ (ರೂ. 42.83), ಮರಳಿಗ (ರೂ. 92.43), ಕೋಣಸಾಲೆ (ರೂ. 65.61). ಒಟ್ಟು ರೂ. 757 ಲಕ್ಷ.ಮಳವಳ್ಳಿ ತಾಲ್ಲೂಕು: ಹಲಗೂರು (ರೂ. 235.89), ಧನಗೂರು (ರೂ. 77.58), ಕಿರುಗಾವಲು (ರೂ. 199.64), ತಳಗವಾದಿ (ರೂ. 98.54), ಹಿಟ್ಟನಹಳ್ಳಿ (ರೂ. 93.35). ಒಟ್ಟು ರೂ. 705 ಲಕ್ಷ.

ಮಂಡ್ಯ ತಾಲ್ಲೂಕು: ಮುತ್ತೇಗೆರೆ (ರೂ. 34), ತಂಗಳಗೆರೆ (ರೂ. 26.31), ಮಾರಗೌಡನಹಳ್ಳಿ (ರೂ. 87.77), ಉಮ್ಮಡಹಳ್ಳಿ (ರೂ. 100.45), ಹನಕೆರೆ (ರೂ. 67.19), ಬಿ.ಗೌಡಗೆರೆ (ರೂ. 72.53), ಚಂದಗಾಲು (ದು) (ರೂ.84.97), ಮಾರಚಾಕನಹಳ್ಳಿ (ರೂ. 40.38), ಗೊರವಾಲೆ (ರೂ. 60.91), ಸಂಪಳ್ಳಿ (ರೂ. 31.41), ಕೊತ್ತತ್ತಿ (ರೂ. 96.04), ಕಾರಸವಾಡಿ (ರೂ. 85.04). ಒಟ್ಟು ರೂ. 787 ಲಕ್ಷ.ನಾಗಮಂಗಲ ತಾಲ್ಲೂಕು: ಹೊನ್ನಾವರ (ರೂ. 42.75), ಬಿದರಕೆರೆ (29.48), ಉಪ್ಪಾರಹಳ್ಳಿ (ರೂ. 33.68), ಪಡುವಲನೇರಲೆಕೆರೆ (ರೂ. 33.05), ಪಡುವಲಪಟ್ಟಣ (ರೂ. 28.85), ಸಾರೇಮೇಗಲಕೊಪ್ಪಲು (ರೂ. 51.33), ಬಿಂಡೇನಹಳ್ಳಿ (ರೂ. 38.16), ಕಲ್ಲುದೇವನಹಳ್ಳಿ (ರೂ. 30.72) ,ಬಿ.ಮಲ್ಲೇನಹಳ್ಳಿ (ರೂ. 26.16), ಚುಂಚನಹಳ್ಳಿ (ರೂ. 79.59), ಜವರನಹಳ್ಳಿ (ರೂ. 52.47), ಲಾಳನಕೆರೆ (ರೂ. 38.03), ಹೊಣಕೆರೆ (16.72). ಒಟ್ಟು ರೂ. 501 ಲಕ್ಷ.ಪಾಂಡವಪುರ ತಾಲ್ಲೂಕು: ಸೀತಾಪುರ (ರೂ. 58.85), ಬೇವಿನಕುಪ್ಪೆ (ರೂ. 43.96), ಕೆನ್ನಾಳು (ರೂ. 203.34), ಸುಂಕಾತೊಣ್ಣೂರು (ರೂ. 72.98), ಲಕ್ಷ್ಮೀಸಾಗರ (ರೂ. 69.87). ಒಟ್ಟು ರೂ. 449 ಲಕ್ಷ.

ಶ್ರೀರಂಗಪಟ್ಟಣ ತಾಲ್ಲೂಕು: ಪಾಲಹಳ್ಳಿ (ರೂ. 159.30), ಬಿದರಹಳ್ಳಿ (ರೂ. 55.10), ಸಬ್ಬನಕುಪ್ಪೆ (ರೂ. 31.99), ಕಪರನಕೊಪ್ಪಲು (ರೂ. 40.44), ನಗುವಿನಹಳ್ಳಿ (ರೂ. 56.34), ಗಾಮನಹಳ್ಳಿ (ರೂ. 55.83). ಒಟ್ಟು ರೂ. 399 ಲಕ್ಷ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.