ಸುವರ್ಣ ಭೂಮಿ: ಫಲಾನುಭವಿಗಳ ಆಯ್ಕೆ

ಗುರುವಾರ , ಜೂಲೈ 18, 2019
24 °C

ಸುವರ್ಣ ಭೂಮಿ: ಫಲಾನುಭವಿಗಳ ಆಯ್ಕೆ

Published:
Updated:

ಮಂಡ್ಯ: ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೃಷಿ ಚಟುವಟಿಕೆಗಾಗಿ ಆರ್ಥಿಕ ನೆರವು ನೀಡಲು ಸರ್ಕಾರ ಇದೇ ವರ್ಷದಿಂದ ಜಾರಿಗೆ ತಂದಿರುವ ಸುವರ್ಣ ಭೂಮಿ ಯೋಜನೆಗಾಗಿ ಮಂಗಳವಾರ ಮಂಡ್ಯ ತಾಲ್ಲೂಕಿನಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.ತಹಶೀಲ್ದಾರ್ ಸೇರಿದಂತೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ರೈತ ಪ್ರತಿನಿಧಿಗಳಿಂದಲೇ ಫಲಾನುಭವಿಗಳನ್ನು ಲಾಟರಿಯ ಮೂಲಕ ಆಯ್ಕೆ ಮಾಡಲಾಯಿತು. ರೈತ ಸಭಾಂಗಣದಲ್ಲಿ ನಡೆದ ಈ ಪ್ರಕ್ರಿಯೆ ಸಂದರ್ಭದಲ್ಲಿ ರೈತರ ಹಾಜರಾತಿ ನಿರೀಕ್ಷೆಗಿಂತಲೂ ಕಡಿಮೆ ಇತ್ತು.ಸಾಮಾನ್ಯ ವರ್ಗದ ಫಲಾನುಭವಿಗಳ ಆಯ್ಕೆಗೆ ಮಾತ್ರವೇ ಲಾಟರಿ ಎತ್ತಲಾಗಿದ್ದು, ಪರಿಶಿಷ್ಟ ಜಾತಿ, ವರ್ಗಗಳಿಗೆ ಸೇರಿದ ಅರ್ಜಿದಾರರನ್ನು ನೇರವಾಗಿ ಪರಿಗಣಿಸಲಾಯಿತು.  ಸಹಾಯಕ ಕೃಷಿ ನಿರ್ದೇಶಕ ಜಯರಾಮಯ್ಯ ಅವರ ಪ್ರಕಾರ, ತಾಲ್ಲೂಕಿನಲ್ಲಿ ಒಟ್ಟಾರೆ 467 ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.ಉಳಿದಂತೆ, ನಿಗದಿತ ಗುರಿಗೆ ಅನುಗುಣವಾಗಿ ಫಲಾನುಭವಿಗಳ  ಆಯ್ಕೆ ಜೊತೆಗೆ, ದಾಖಲಾತಿ ಪರಿಶೀಲನೆ ಸಂದರ್ಭದಲ್ಲಿ ತಿರಸ್ಕೃತರಾಗುವ ಅರ್ಜಿದಾರರ ಬದಲಿಗೆ ಅಯ್ಕೆ ಮಾಡಲು ಹೆಚ್ಚುವರಿಯಾಗಿ ಶೇ 20ರಷ್ಟು ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.ಮಂಡ್ಯ ತಾಲ್ಲೂಕಿನಲ್ಲಿ ಕೆರೆಗೋಡು ಮತ್ತು ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ನಿಗದಿತ ಗುರಿಗಿಂತಲೂ ಕಡಿಮೆ ಸಂಖ್ಯೆಯಲ್ಲಿ ಅರ್ಜಿಗಳು ಬಂದಿದ್ದ ಹಿನ್ನೆಲೆಯಲ್ಲಿ ಇಲ್ಲಿ ಲಾಟರಿ ಆಯ್ಕೆಗೆ ಇರಲಿಲ್ಲ. ಕೆರೆಗೋಡು ಹೋಬಳಿ ವ್ಯಾಪ್ತಿಯಲ್ಲಿ 260 ಫಲಾನುಭವಿಗಳ ಗುರಿ ಇದ್ದರೆ 201 ಅರ್ಜಿಗಳು, ಕಸಬಾ ವ್ಯಾಪ್ತಿಯಲ್ಲಿ 80  ಅರ್ಜಿಗಳು ಬಂದಿದ್ದವು.ಉಳಿದಂತೆ, ಬಸರಾಳು ವ್ಯಾಪ್ತಿಯಲ್ಲಿ ಒಟ್ಟಾರೆ 1365 ಅರ್ಜಿಗಳು ಬಂದಿದ್ದು, ಮುಖ್ಯ ಪಟ್ಟಿಗೆ 300 ಫಲಾನುಭವಿಗಳನ್ನು ಹೆಚ್ಚುವರಿ ಮೀಸಲು ಪಟ್ಟಿಗೆ 60 ಜನರನ್ನು ಆಯ್ಕೆ ಮಾಡಲಾಯಿತು.ಕೊತ್ತತ್ತಿ ಹೋಬಳಿಯಲ್ಲಿ 742 ಅರ್ಜಿಗಳು ಬಂದಿದ್ದು,  ಮುಖ್ಯ ಪಟ್ಟಿಗೆ 260 ಹಾಗೂ ಹೆಚ್ಚುವರಿ ಪಟ್ಟಿಗೆ 52 ಅರ್ಜಿದಾರರನ್ನು ಆಯ್ಕೆ ಮಾಡಲಾಯಿತು. ದುದ್ದ ಹೋಬಳಿ ಯಲ್ಲಿ ಗರಿಷ್ಠ ಅಂದರೆ 2,512 ಅರ್ಜಿಗಳು ಬಂದಿದ್ದು, ಮುಖ್ಯ ಪಟ್ಟಿಗೆ 436 ಅರ್ಜಿದಾರರನ್ನು ಹೆಚ್ಚುವರಿ ಪಟ್ಟಿಗೆ 87 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.ಕಾವೇರಿ ನೀರಾವರಿ ನಾಲೆ ವ್ಯಾಪ್ತಿಯಲ್ಲಿ ಬರುವ ರೈತರ ಅರ್ಜಿಗಳನ್ನು ತಿರಸ್ಕರಿಸಲಿದ್ದು, ಖುಷ್ಕಿ, ಕೊಳವೆ ಬಾವಿ, ಮಳೆ ಅಚ್ಚುಕಟ್ಟು ಬಯಲಿನಲ್ಲಿ ಭೂಮಿ ಇರುವ ರೈತರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ ಎಂದು ಜಯರಾಮಯ್ಯ ತಿಳಿಸಿದರು.ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಎರಡು ಕಂತಿನಲ್ಲಿ ಒಟ್ಟಾರೆ 10 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲು ಸರ್ಕಾರ `ಸುವರ್ಣ ಭೂಮಿ~ ಯೋಜನೆ ತಂದಿರುವುದನ್ನು ಇಲ್ಲಿ ಸ್ಮರಿಸಬಹುದು. ಈ ಸಂದರ್ಭದಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿ ಪೂರ್ಣೀಮಾ, ಜಿಪಂ ಸದಸ್ಯ ಜಯಕಾಂತಾ ಇತರರು ಹಾಜರಿದ್ದರು.400 ರೈತರ ಆಯ್ಕೆ

ಮದ್ದೂರು: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆತಗೂರು ಹೋಬಳಿ ಸುವರ್ಣ ಭೂಮಿ ಯೋಜನೆ ಫಲಾನುಭವಿಗಳನ್ನು ಲಾಟರಿ  ಮೂಲಕ ಆಯ್ಕೆಮಾಡಲಾಯಿತು.ಒಟ್ಟು ಅರ್ಜಿ ಹಾಕಿದ್ದ 1549 ಫಲಾನು ಭವಿಗಳಲ್ಲಿ ಅಂತಿಮವಾಗಿ 400 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಜಿಪಂ ಸದಸ್ಯರಾದ ಕಂಠಿ ಸುರೇಶ್, ಕೆ.ರವಿ, ತಾಪಂ ಸದಸ್ಯರಾದ ಸಿ.ನಾಗೇಗೌಡ, ನಾರಾ ಯಣಸ್ವಾಮಿ, ಕೃಷಿ ಸಹಾಯಕ ನಿರ್ದೇಶಕಿ ಡಾ.ಸುಷ್ಮ, ತಹಶೀಲ್ದಾರ್ ಚಂದ್ರಶೇಖರಯ್ಯ, ಸಹಾಯಕ ಕೃಷಿ ಅಧಿಕಾರಿಗಳಾದ ಎಸ್.ಆರ್.ರವಿ, ರಂಗಸ್ವಾಮಿ ಸೇರಿದಂತೆ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry