ಶನಿವಾರ, ಮೇ 30, 2020
27 °C

ಸುವರ್ಣ ಭೂಮಿ ಯೋಜನೆ ಫಲಾನುಭವಿಗಳ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಕಲಗೂಡು: ಸುವರ್ಣಭೂಮಿ ಯೋಜನೆಯ ಫಲಾನುಭವಿಗಳ ಆಯ್ಕೆಗೆ ಮಂಗಳವಾರ ತಾಲ್ಲೂಕಿನ ಹೋಬಳಿ ಕೇಂದ್ರಗಳಲ್ಲಿ ನಡೆದ ಲಾಟರಿ ಪ್ರಕ್ರಿಯೆಗೆ ರೈತರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.ಪಟ್ಟಣದ ಅಂಬೇಡ್ಕರ್ ಭನವದಲ್ಲಿ ನಡೆದ ಕಸಬಾ ಹೋಬಳಿ ಫಲಾನು ಭವಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಕೇವಲ ಬೆರಳೆಣಿಕೆಯಷ್ಟು ರೈತರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಪ್ರಕ್ರಿಯೆಗೆ ಆಗಮಿಸಿದ್ದ ಅಧಿಕಾರಿಗಳು ಪೊಲೀಸರ ಸಂಖ್ಯೆಯೆ ರೈತರಿಗಿಂತ ಹೆಚ್ಚಿತ್ತು.

 

ಲಾಟರಿ ಎತ್ತಲು ಡಬ್ಬದಿಂದ ಚೀಟಿ ಎತ್ತಿಕೊಡಲು ಜನರನ್ನು ಬಲವಂತದಿಂದ ವೇದಿಕೆಗೆ ಕರೆತರುವ ಸ್ಥಿತಿ ಉಂಟಾಗಿತ್ತು. ತಾಲ್ಲೂಕಿನ ಮಲ್ಲಿಪಟ್ಟಣ, ಕೊಣನೂರು, ದೊಡ್ಡಮಗ್ಗೆ, ರಾಮನಾಥಪುರಗಳಲ್ಲೂ ಇದೇ ಸ್ಥಿತಿ ಮುಂದುವರೆದಿತ್ತು. ಈ ಯೋಜನೆಗೆ ತಾಲ್ಲೂಕಿನಲ್ಲಿ 8498 ಅರ್ಜಿ ಬಂದಿದ್ದವು. 2406 ಫಲಾನುಭವಿಗಳ ಆಯ್ಕೆಗೆ ಅವಕಾಶ ಇದ್ದು ಪರಿಶಿಷ್ಟ ಜಾತಿಯ 830 ಪರಿಶಿಷ್ಠ ಪಂಗಡದ 89 ಹಾಗೂ ಸಾಮಾನ್ಯ ವರ್ಗದಿಂದ 1496 ಜನರನ್ನು ಆಯ್ಕೆ ಮಾಡಲಾಯಿತು.ಅರಸೀಕೆರೆ ವರದಿ:  ಸರ್ಕಾರದ ಸವಲತ್ತುಗಳನ್ನು ರೈತರು ಸದುಪಯೋಗಪಡಿಸಿಕೊಂಡಾಗ ಯೋಜನೆ ಅನುಷ್ಟಾನ ಸಾರ್ಥಕವಾಗುತ್ತದೆ ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ ನುಡಿದರು.ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಸಬಾ ಹೋಬಳಿಯ ಸುವರ್ಣಭೂಮಿ ಫಲಾನುಭವಿ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೃಷಿ ಇಲಾಖೆಯವರು ರೈತರಿಗೆ ಪರ್ಯಾಯ ಬೆಳೆಗಳನ್ನು ಬೆಳೆಯಲು ಮಾಹಿತಿ ನೀಡಬೇಕು ಎಂದರು.ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್‌ನಾಯಕ್ ಮಾತನಾಡಿ ಸುವರ್ಣಭೂಮಿ ಯೋಜನೆಯಡಿ ಸರ್ಕಾರ ರೈತರಿಗೆ ರೂ. 5ರಿಂದ 10 ಸಾವಿರವನ್ನು ನೀಡುತ್ತಿದೆ. ಕೃಷಿ , ಅರಣ್ಯ, ತೋಟಗಾಕೆ, ರೇಷ್ಮೆ ಇಲಾಖೆಗಳಿಗೆ  ಯೋಜನೆ ಒಳಪಟ್ಟಿದೆ ಎಂದರು.

ಅರ್ಜಿ ಹೆಚ್ಚು ಸಲ್ಲಿಕೆಯಾಗಿದ್ದ ಕಡೆ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆಮಾಡಲಾಯಿತು ಎಂದರು. 

ತಾಲ್ಲೂಕು ನೋಡೆಲ್ ಅಧಿಕಾರಿ ಜಿಲ್ಲಾ ಕೈಗಾರಿಕಾ -ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಮುಕುಂದ ಕೃಷ್ಣೇ ಗೌಡ,  ತೋಟಗಾರಿಕೆ ಇಲಾಖೆ ಅಧಿ ಕಾರಿ ವಿಜಯ್‌ಕುಮಾರ್ ಇದ್ದರು.ಚನ್ನರಾಯಪಟ್ಟಣ ವರದಿ: ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಸುವರ್ಣ ಭೂಮಿ ಯೋಜನೆ ಪ್ರೋತ್ಸಾಹಧನಕ್ಕೆ ಫಲಾನುಭವಿಗಳನ್ನು ಲಾಟರಿ ಮೂಲಕ ಮಂಗಳವಾರ ಆಯ್ಕೆ ಮಾಡಲಾಯಿತು.ಉದಯಪುರ ಹೋಬಳಿ (399), ಬಾಗೂರು ಹೋಬಳಿ (445), ನುಗ್ಗೇಹಳ್ಳಿ ಹೋಬಳಿ (443), ಹಿರೀಸಾವೆ ಹೋಬಳಿ (412), ಶ್ರವಣಬೆಳಗೊಳ  ಹೋಬಳಿ (534). ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.

 

ಇದರ ಜೊತೆ ಪ್ರತಿ ಹೋಬಳಿಯಲ್ಲಿ ಶೇ. 10ರಷ್ಟು ಫಲಾನುಭವಿಗಳನ್ನು ಹೆಚ್ಚುವರಿಯಾಗಿ ಆಯ್ಕೆ ಮಾಡಲಾಗಿದ್ದು, ಈಗ ಆಯ್ಕೆಯಾಗಿರುವ ಫಲಾನುಭವಿಗಳಲ್ಲಿ ಖಾತೆದಾರರಲ್ಲದಿದ್ದರೆ, ಊರು ತೊರೆದಿದ್ದರೆ ಅಂತವರನ್ನು ಕೈ ಬಿಟ್ಟು ಹೆಚ್ಚುವರಿ ಪಟ್ಟಿಯಲ್ಲಿರುವರನ್ನು ಆಯ್ಕೆಗೆ ಪರಿಗಣಿಸಲಾಗುವುದುಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಾಮಹನುಮಯ್ಯ ತಿಳಿಸಿದ್ದಾರೆ.ಬಾಣಾವರ ವರದಿ:ಹೋಬಳಿಯಲ್ಲಿ 292 ಫಲಾನುಭವಿಗಳು  ಸುವರ್ಣ ಭೂಮಿ ಯೋಜನೆಗೆ ಆಯ್ಕೆಯಾಗಿದ್ದಾರೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.  ಪಟ್ಟಣದ ಹನುಮಾನ್ ಸ್ಪೋರ್ಟ್ಸ್ ಕ್ಲಬ್ ಆವರಣದಲ್ಲಿ ಲಾಟರಿ ಮೂಲಕ ಸುವರ್ಣಭೂಮಿ ಯೋಜನೆ ಫಲಾನುಭವಿಗಳ ಆಯ್ಕೆ  ನಡೆಯಿತು.ಲಾಟರಿ ಪ್ರಕ್ರಿಯೆಯಲ್ಲಿ ತಾ.ಪಂ. ಸದಸ್ಯ ಬಿ.ರವಿಶಂಕರ್, ಇ.ಓ.ಚಂದ್ರಶೇಖರ್, ವಿ.ಎ.ಮಂಜುನಾಥ, ನೋಡಲ್ ಅಧಿಕಾರಿಗಳು ಇದ್ದರು.ಹಳೇಬೀಡು ವರದಿ: ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ ಮಂಗಳವಾರ ಸುವರ್ಣ ಭೂಮಿ ಯೋಜನೆ ಫಲಾನುಭವಿಗಳ ನ್ನು ಲಾಟರಿ ಎತ್ತವ ಮೂಲಕ  ಆಯ್ಕೆ ಮಾಡಲಾಯಿತು.ಕೃಷಿ ವಿಭಾಗದಲ್ಲಿ ಪ್ರೋತ್ಸಾಹ ಧನ ಪಡೆಯಲು ಪರಿಶಿಷ್ಟ ಜನಾಂಗದಿಂದ 269 ಅರ್ಜಿಗಳು ಬಂದಿದ್ದವು. 151 ಅರ್ಜಿ ಹಾಗೂ ಹೆಚ್ಚುವರಿಯಾಗಿ 15 ಪಲಾನುಭವಿಗಳು ಲಾಟರಿ ಮುಖಾಂತರ ಆಯ್ಕೆಯಾದರು.ಪರಿಶಿಷ್ಟ ಪಂಗಡದಲ್ಲಿ 21 ಅರ್ಜಿ ಬಂದಿದ್ದರಿಂದ, ಅರ್ಜಿಸಲ್ಲಿಸಿದ ಎಲ್ಲ ರೈತರು ಆಯ್ಕೆಯಾದರು. ಸಾಮಾನ್ಯ ವರ್ಗದಿಂದ 2256 ಅರ್ಜಿಗಳ ಪೈಕಿ 559 ಹಾಗೂ ಹೆಚ್ಚುವರಿಯಾಗಿ 60 ಅರ್ಜಿಗಳನ್ನು ಲಾಟರಿ ಆಯ್ಕೆ ಮಾಡಲಾಯಿತು.  ಜಿ.ಪಂ. ಯೋಜ ನಾಧಿಕಾರಿ ಸಿದ್ದಪ್ಪ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು. ಅರಣ್ಯಾ ಧಿಕಾರಿ ಡಿ.ಎಂ. ಮರಡಿಮನಿ, ಕಂದಾಯ ನಿರೀಕ್ಷಕ ಎನ್.ಡಿ.ರಂಗಸ್ವಾಮಿ, ಸಮಾಜ ಕಲ್ಯಾಣ ಅಧಿಕಾರಿ ಕೆ.ಆರ್.ದೇವರಾಜು ಸಹಾಯಕ ನೋಡಲ್ ಅಧಿಕಾರಿಗಳಾಗಿ ಕರ್ತವ್ಯನಿರ್ವಹಿಸಿದರು.ರೈತ ಮುಖಂಡ ಚನ್ನೇಗೌಡ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಡಿ.ಪಿ, ಜಯರಾಮ್, ಯಗಚಿ ಸಾವಯವ ಕೃಷಿ ಪರಿವಾರ ಪ್ರಧಾನ ಕಾರ್ಯದರ್ಶಿ ಕೆ.ಕೆ.ಶಿವಕುಮಾರ್ ಇತರರು ಇದ್ದರು.ಜಾವಗಲ್ ವರದಿ: ಪಟ್ಟಣದಲ್ಲಿ ಮಂಗಳವಾರ ಸುವರ್ಣ ಭೂಮಿ ಯೋಜನೆ ಫಲಾನುಭವಿಗಳನ್ನು ಅಂಬೇಡ್ಕರ್ ಸಮುದಾಯ ಭವನದಲ್ಲಿ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ಯನ್ನು ನಡೆಸಲಾಯಿತು. ಪರಿಶಿಷ್ಟ ಜಾತಿಯಿಂದ 194 ಪರಿಶಿಷ್ಟ ಪಂಗ ಡದಿಂದ 46 ಸಾಮಾನ್ಯ ವರ್ಗ ದಿಂದ 344 ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಲಾಯಿತು. ನೊಡಲ್ ಅಧಿಕಾರಿಗಳಾದ ಜಿಲ್ಲಾ ಹಿಂದುಳಿದ ಸಮಾಜ ಕಲ್ಯಾಣಾಧಿಕಾರಿ ಜಗದೀಶ್, ಜಾವಗಲ್ ಹೋಬಳಿ ರಾಜಸ್ವನಿರೀಕ್ಷಿಕ ರಮೇಶ್, ತಾ.ಸಾಮಾ ಜಿಕ ಅರಣ್ಯ ವಲಯಾಧಿಕಾರಿ ಚಂದ್ರೇಗೌಡ, ತಾ. ಸಮಾಜಕಲ್ಯಾಣ ಇಲಾಖೆ ವ್ಯವಸ್ಥಾಪಕ ರಾಜೇಂದ್ರ, ಕೃಷಿ ಅಧಿಕಾರಿ ಕುಮಾರಸ್ವಾಮಿ, ಸಮಾಜ ಕಲ್ಯಾಣ ಇಲಾಖಾ ಅಧಿಕಾರಿ ರುದ್ರಯ್ಯ, ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವರಾಜ್ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.