ಸುವರ್ಣ ಮಹೋತ್ಸವ: ವಿರೋಧ ಸರಿಯಲ್ಲ

7

ಸುವರ್ಣ ಮಹೋತ್ಸವ: ವಿರೋಧ ಸರಿಯಲ್ಲ

Published:
Updated:

ಗುಲ್ಬರ್ಗ:  ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಬಚಾವೋ ಆಂದೋಲನದ ಹೆಸರಿನಲ್ಲಿ ಪ್ರೊ. ಆರ್.ಕೆ. ಹುಡಗಿ ಹಾಗೂ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ ಅವರು ನೀಡಿರುವ ಪತ್ರಿಕಾ ಹೇಳಿಕೆ, ಆಂದೋಲನವನ್ನು ತಪ್ಪು ದಾರಿ ಹಿಡಿಯುವಂತೆ ಮಾಡಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮಧುಕರ ನಾಯಕ, ಹಿರಿಯ ವಕೀಲ ಸಿದ್ರಾಮಪ್ಪ ಐರೆಡ್ಡಿ  ಖಂಡಿಸಿದ್ದಾರೆ.

 

ಶಿಕ್ಷಣ ಸಂಸ್ಥೆ ಅವಸಾನದ ಅಂಚಿಗೆ ತಲುಪಿದ ಬಗ್ಗೆ ಹಾಗೂ 70 ಸಾವಿರ ಅರ್ಜಿಗಳನ್ನು ತಿರಸ್ಕರಿಸಿದ ಬಗ್ಗೆ ಅವರು ಹೇಳಿರುವುದರಲ್ಲಿ ಯಾವುದೇ ಅತಿಶಯೋಕ್ತಿ ಅಂಶಗಳಿಲ್ಲ.ಆದರೆ ಶನಿವಾರ ನಡೆಯಲಿರುವ ಶೇಠ ಶಂಕರ ಲಾಹೋಟಿ ಕಾಲೇಜಿನ ಸುವರ್ಣ ಮಹೋತ್ಸವ ಸಮಾರಂಭಕ್ಕೆ ನ್ಯಾಯಾಧೀಶರು ಮತ್ತು ನ್ಯಾಯಮೂರ್ತಿಗಳು ಭಾಗವಹಿಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲ ಎಂದು 28 ಜನ ಹಿರಿಯ ಕಿರಿಯ ವಕೀಲರು ಸಹಿ ಮಾಡಿದ ಪತ್ರದಲ್ಲಿ ತಿಳಿಸಿದ್ದಾರೆ

ಖಂಡನೆ

ಗುಲ್ಬರ್ಗ: ಚಿತ್ತಾಪುರ ತಾಲ್ಲೂಕಿನ ಸನ್ನತಿಯಲ್ಲಿರುವ ಪ್ರಾಚೀನ ಕಾಲದ ಬುದ್ಧನ ಅವಶೇಷಗಳ ಸ್ಥಳದಲ್ಲಿರುವ ದುರ್ಗಮ್ಮ ದೇವಿಯ ಮೂರ್ತಿಯನ್ನು ಸ್ಥಳಾಂತರಕ್ಕೆ ಆಗ್ರಹಿಸಿ ಹೋರಾಟ ನಡೆಸಿದ ಬೋಧಿ ಧಮ್ಮ ಬಂತೇಜಿ ಹಾಗೂ ಅವರ ಅನುಯಾಯಿಗಳನ್ನು ಬಂದಿಸಿರುವುದನ್ನು ಭಾರತೀಯ ದಲಿತ ಸಂಘರ್ಷ ಸಮಿತಿ ಖಂಡಿಸಿದೆ.ಗುಲ್ಬರ್ಗದ ಮಿನಿ ವಿಧಾನಸೌಧದ ಎದುರುಗಡೆ ಬೌದ್ಧ ಬಿಕ್ಕುಗಳು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಉಪವಾಸ ಸತ್ಯಗ್ರಹಕ್ಕೆ ಸಮಿತಿ ಬೆಂಬಲಿಸಿದೆ. ಸಂಸ್ಥಾಪಕ ಡಿ.ಸಿ. ಮೇಲಿನಕೇರಿ, ಉತ್ತರ ಕರ್ನಾಟಕ ಸಂಚಾಲಕ ರೇವಣಸಿದ್ದಪ್ಪ ಕುಂಬಾರ, ನಗರ ಸಂಚಾಲಕ ಸುಭಾಷ ನೀಲೂರಕರ, ಹೈ.ಕ. ಸಂಚಾಲಕ ಬಿ.ಡಿ. ಮಾಳಗೆ, ಉಪ ಸಂಚಾಲಕ ರಜನಿಕಾಂತ ಬಂಟಿ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಎಸ್. ಭಾವಿಕಟ್ಟಿ, ಜಿಲ್ಲಾ ಸಂಘಟನಾ ಸಂಚಾಲಕ ರಾಜಕುಮಾರ ಎಸ್. ಕಾಂಬಳೆ ಕೇರೂರ ಖಂಡಿಸಿದ್ದಾರೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಎಂ. ಸೋನಾಕಾಂಬಳೆ ತಿಳಿಸಿದ್ದಾರೆ.20ಕ್ಕೆ ಲಕ್ಷ ಬಿಲ್ವಾರ್ಚನೆ

ಗುಲ್ಬರ್ಗ:
ಇಲ್ಲಿನ ಬಿದ್ದಾಪುರ ಬಡಾವಣೆಯ ರಾಯರ ಮಠದಲ್ಲಿ ಮಹಾಶಿವರಾತ್ರಿ ನಿಮಿತ್ತ ಫೆ. 20ರಂದು ಬೆಳಿಗ್ಗೆ ಲಕ್ಷ ಬಿಲ್ವಾರ್ಚನೆ, ರುದ್ರಾಭಿಷೇಕ, ಶಂಕರಾಚಾರ್ಯರ ಅಷ್ಟೋತ್ತರ ಪಾರಾಯಣ ನಡೆಯಲಿದೆ ಎಂದು ಆದಿ ಶಂಕರಾಚಾರ್ಯ ಸೇವಾ ಸಮಿತಿಯ ಅಧ್ಯಕ್ಷ ಕೆ. ಶಶಿಕಾಂತರಾವ ಮೆಳಕಂದಿ ತಿಳಿಸಿದ್ದಾರೆ.ಅಂದು ಸಂಜೆ 5 ಗಂಟೆಗೆ ಶಿವರಾತ್ರಿ ಮಹತ್ವ ಕುರಿತು ಮಾಣಿಕ ಸಂಸ್ಥಾನದ ಜ್ಞಾನ ರಾಜ ಮಾಣಿಕಪ್ರಭು ಮಹಾರಾಜ ಮಾತನಾಡಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳಲು ಸಮಿತಿ ಮನವಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry