ಸುವರ್ಣ `ಮಾನಸ'ದ ರೂಪಾಂತರ

7
ಪಂಚರಂಗಿ

ಸುವರ್ಣ `ಮಾನಸ'ದ ರೂಪಾಂತರ

Published:
Updated:
ಸುವರ್ಣ `ಮಾನಸ'ದ ರೂಪಾಂತರ

ಬೆಂಗಳೂರಿನ ಹಳೆಯ ಚಿತ್ರಮಂದಿರಗಳು ಮಾಲ್‌ಗಳಾಗಿ, ಆಸ್ಪತ್ರೆಗಳಾಗಿ ರೂಪಾಂತರ ಹೊಂದುತ್ತಿರುವ ಸಂದರ್ಭದಲ್ಲಿ ಕೋಣನಕುಂಟೆಯ `ಮಾನಸ' ಚಿತ್ರಮಂದಿರ ತನ್ನ ಚಿನ್ನದ ಹಬ್ಬದ ಹೊತ್ತಿನಲ್ಲಿ ಹೊಸ ತಾರುಣ್ಯದ ಅವತಾರ ತಾಳಿದೆ.`ಮಾನಸ' ಚಿತ್ರಮಂದಿರದ ರೂಪಾಂತರ ಇದು ಮೊದಲೇನಲ್ಲ. 1997ರಲ್ಲಿ ಡಿಟಿಎಸ್ ತಂತ್ರಜ್ಞಾನದೊಂದಿಗೆ ನವೀಕರಣಗೊಂಡಿತ್ತು. ಈಗ  `11.1 ಏರೋ' ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಜಾಗತಿಕ ಮಟ್ಟದ ಈ ಧ್ವನಿ ತಂತ್ರಜ್ಞಾನವನ್ನು ಬಾಕೋ ಕಂಪನಿಯ ಸಹಯೋಗದೊಂದಿಗೆ `ಮಾನಸ' ತನ್ನದಾಗಿಸಿಕೊಂಡಿದೆ. ಇದರಿಂದಾಗಿ ಚಿತ್ರಮಂದಿರದಲ್ಲಿ 360 ಡಿಗ್ರಿ ಸುತ್ತಳತೆಯಲ್ಲೂ ಪ್ರೇಕ್ಷಕರು ಸಿನಿಮಾದ ಸಂಗೀತ ಮತ್ತು ವಿಶೇಷ ಶಬ್ದಗಳನ್ನು ಆಸ್ವಾದಿಸಬಹುದಾಗಿದೆ.ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಸುಸಜ್ಜಿತಗೊಂಡಿರುವ `ಮಾನಸ' ಚಿತ್ರಮಂದಿರವನ್ನು ಪತ್ರಕರ್ತರಿಗೆ ಪರಿಚಯಿಸುವ ಕಾರ್ಯಕ್ರಮದಲ್ಲಿ,  ಬಾರ್ಕೋ ಕಂಪನಿಯ ಮಧುಸೂದನ್, ಥಿಯೇಟರ್‌ನ ವ್ಯವಸ್ಥಾಪಕ ಕಾವೇರಪ್ಪ ಹಾಗೂ ಸೌಂಡ್ ಎಂಜಿನಿಯರ್ ಫೆಲಿಸ್ ರಾಜ ಹಾಜರಿದ್ದರು.ಉತ್ತರ ಪ್ರದೇಶದ ನೋಯ್ಡೊ ಮೂಲದ `ಬಾರ್ಕೋ' ಅಭಿವೃದ್ಧಿಪಡಿಸಿರುವ `11.1 ಏರೋ' ತಂತ್ರಜ್ಞಾನವನ್ನು ಈಗಾಗಲೇ ಮೈಸೂರಿನ ಬಿ.ಆರ್.ಸಿ. ಮಲ್ಟಿಫ್ಲೆಕ್ಸ್‌ನಲ್ಲಿ ಅಳವಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry