ಸುವರ್ಣ ಸೌಧ

7

ಸುವರ್ಣ ಸೌಧ

Published:
Updated:
ಸುವರ್ಣ ಸೌಧ

ಮುಂಬೈ (ಪಿಟಿಐ): ಬೆಳಗಾವಿಯಲ್ಲಿ ನಿರ್ಮಿಸಲಾಗಿರುವ ಸುವರ್ಣ ಸೌಧದ ಉದ್ಘಾಟನಾ  ಸಮಾರಂಭದಲ್ಲಿ  ಯಾವುದೇ  ಕಾರಣಕ್ಕೂ  ಪಾಲ್ಗೊಳ್ಳ ಬಾರದು ಎಂದು ಶಿವ ಸೇನೆಯ  ಕಾರ್ಯಾಧ್ಯಕ್ಷ  ಉದ್ಧವ್ ಠಾಕ್ರೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಒತ್ತಾಯಿಸಿದ್ದಾರೆ.ಈ ತಿಂಗಳ 11ರಂದು ಸುವರ್ಣ ಸೌಧದ ಉದ್ಘಾಟನೆ ನಡೆಯಲಿದ್ದು, ರಾಷ್ಟ್ರಪತಿ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದು ಎಂದು ಅವರು ಹೇಳಿದ್ದಾರೆ.ಬೆಳಗಾವಿ ವಿವಾದಗ್ರಸ್ತ ಪ್ರದೇಶವಾಗಿದ್ದು, ಸುವರ್ಣ ಸೌಧ ಉದ್ಘಾಟನೆ ನ್ಯಾಯಾಲಯ ನಿಂದನೆ ಪ್ರಕರಣವಾಗುತ್ತದೆಯೇ ಎಂಬುದನ್ನು ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಪರಿಶೀಲಿಸಬೇಕು ಎಂದು ಉದ್ಧವ್ ಠಾಕ್ರೆ ಸಲಹೆ ಮಾಡ್ದ್ದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry