ಸುವರ್ಣ ಸೌಧಕ್ಕೆ ಏಕೆ ವಿರೋಧ?

7

ಸುವರ್ಣ ಸೌಧಕ್ಕೆ ಏಕೆ ವಿರೋಧ?

Published:
Updated:

ಬೆಳಗಾವಿಯ ಸುವರ್ಣ ಸೌಧದ  ನಿರ್ಮಾಣ ನಿರ್ಧಾರವೇ ಸರಿಯಲ್ಲ ಎಂದು ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ. ಎಸ್. ಪಾಟೀಲರ ಹೇಳಿಕೆ ನೋಡಿ ಆಶ್ಚರ್ಯವಾಯಿತು. ನಿರ್ಮಾಣಕ್ಕೆ ತಗುಲಿದ ವೆಚ್ಚ ರೂ 400 ಕೋಟಿಗಳನ್ನು ಆ ಭಾಗದ ಜನರ ಮೂಲ ಸೌಕರ್ಯ ಕಲ್ಪಿಸಲು ಬಳಸಬಹುದಿತ್ತು ಎಂದಿದ್ದಾರೆ. ಎಷ್ಟು ಅನುದಾನ ಬಿಡುಗಡೆ ಮಾಡಿ ಈ ಭಾಗದ ಸಮಸ್ಯೆಗಳು ಬಗೆಹರಿಸಿದ್ದಾರೆ ಇವರು....?

 

ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪನವರೂ ಬೆಳಗಾವಿಯಲ್ಲಿ ವಿಧಾನಸೌಧ ಕಟ್ಟಿದ್ದು ಸನ್ಯಾಸಿ ಸಂಸಾರ ಹೂಡಿದಂತಿದೆ ಎಂದಿದ್ದಾರೆ. ಇವರ ಹೇಳಿಕೆ ನೋಡಿದರೆ ಕರ್ನಾಟಕ ಎಂದರೆ ಅದು  ಬೆಂಗಳೂರು ಮಾತ್ರ ಎಂಬಂತಿದೆ. ಸರ್ಕಾರಿ ಅಧಿಕಾರಿಗಳಿಗೆ ಕಾರು, ವೇತನ, ಭತ್ಯೆ, ಬಂಗಲೆ ನೀಡಿದರೂ ಉತ್ತರ ಕರ್ನಾಟಕಕ್ಕೆ ಹೋಗಿ ಕೆಲಸ ಮಾಡುವುದಿಲ್ಲ. ಸಣ್ಣ ಪುಟ್ಟ ಕೆಲಸಗಳಿದ್ದರೂ  ದೂರದಿಂದ ಬರುವ,  ಬಡವರ ಪಾಡೇನು...? ಬಂದರೂ ಒಂದು ದಿನದಲ್ಲಿ ಆಗುವ ಕೆಲಸಕ್ಕೆ ಹತ್ತು ದಿನ ತೆಗೆದುಕೊಳ್ಳುವ ಅಧಿಕಾರಿಗಳು ಎಷ್ಟಿಲ್ಲ?  ಐಎಎಸ್ ಅಧಿಕಾರಿಗಳಿಗಂತೂ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಿದ್ದು ಮಗ್ಗಲು ಮುಳ್ಳಾಗಿದೆ.ವಿಧಾನಸೌಧದ ಶೇ.30ರಷ್ಟು ಕಚೇರಿಗಳು ಸುವರ್ಣ ಸೌಧಕ್ಕೆ ಸ್ಥಳಾಂತರಗೊಂಡರೆ ಅಧಿಕಾರಿಗಳು ಅಲ್ಲಿಯೇ ಇರಬೇಕಾಗುತ್ತದೆ. ಇದರಿಂದ ಜನರ ಸಂಕಷ್ಟ ಅರಿಯಲು ಸಹಾಯವಾಗುತ್ತದೆ. ಉತ್ತರಕರ್ನಾಟಕದ ಸಕಲ ಕಾರ್ಯಗಳಿಗೂ ಸುವರ್ಣಸೌಧ ಕೇಂದ್ರವಾಗಿರಲಿ, ಸಚಿವರು ತಿಂಗಳಿಗೆ 10 ದಿನ ಅಲ್ಲಿ ಕೆಲಸ ಮಾಡಲಿ. ಯಾಕೆ ಅದು ಸನ್ಯಾಸಿ ಸಂಸಾರವಾಗುತ್ತದೆ ನೋಡೋಣ.ಆದರೆ ಅಲ್ಲಿ ಕೆಲಸ ಮಾಡುವ ಇಚ್ಚಾಶಕ್ತಿ ಇವರಿಗಿಲ್ಲ. ಉತ್ತರ ಕರ್ನಾಟಕದಲ್ಲಿ  ಅಧಿಕಾರಿಗೆ ಕೆಲಸ ಮಾಡಲು ಮನಸ್ಸಿಲ್ಲ. ರಾಜಕೀಯ ವ್ಯಕ್ತಿಗಳ ಕಾಲು ಹಿಡಿದಾದರೂ ಸರಿ ಬೆಂಗಳೂರಿನಲ್ಲಿ ನಿಯೋಜನೆಗೊಳ್ಳುತ್ತಾರೆ. ಬಯಲು ಸೀಮೆಯ ಬಗ್ಗೆ ಯಾಕಿಷ್ಟು ತಾತ್ಸಾರ.....?  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry