ಸುವರ್ಣ ಸೌಧ ಉದ್ಘಾಟನೆ ನಾಲ್ವರು ಮಾಜಿ ಸಿ.ಎಂಗಳಿಗೆ ಆಹ್ವಾನ

7

ಸುವರ್ಣ ಸೌಧ ಉದ್ಘಾಟನೆ ನಾಲ್ವರು ಮಾಜಿ ಸಿ.ಎಂಗಳಿಗೆ ಆಹ್ವಾನ

Published:
Updated:

ಬೆಂಗಳೂರು: ಬೆಳಗಾವಿಯಲ್ಲಿ ನಿರ್ಮಿಸಿ ರುವ `ಸುವರ್ಣಸೌಧ~ದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವಂತೆ ಕೋರಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ನಾಲ್ಕು ಮಂದಿ ಮಾಜಿ ಮುಖ್ಯಮಂತ್ರಿಗಳಿಗೆ ವಿಶೇಷ ಆಹ್ವಾನ ನೀಡಿದ್ದಾರೆ.ಮಾಜಿ ಮುಖ್ಯಮಂತ್ರಿಗಳಾದ ಧರ್ಮ ಸಿಂಗ್, ಎಚ್.ಡಿ.ಕುಮಾರ ಸ್ವಾಮಿ, ಬಿ.ಎಸ್.ಯಡಿಯೂರಪ್ಪ ಮತ್ತು ಡಿ.ವಿ.ಸದಾನಂದ ಗೌಡ ಅವರಿಗೆ ಶೆಟ್ಟರ್ ಪತ್ರ ಬರೆದಿದ್ದಾರೆ. ಅಧಿಕೃತ ಆಹ್ವಾನ ಪತ್ರಿಕೆ ಇನ್ನೂ ಮುದ್ರಣವಾಗಬೇಕಿದೆ.

 

ವೈಯಕ್ತಿಕ ಪತ್ರ ಬರೆಯುತ್ತಿದ್ದು, ಸಮಾರಂಭದಲ್ಲಿ ಭಾಗವಹಿಸಬೇಕು ಎಂದು ಕೋರಿದ್ದಾರೆ.ಸುವರ್ಣಸೌಧವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ 11ರಂದು ಉದ್ಘಾಟಿಸಲಿದ್ದಾರೆ. ರಾಜ್ಯಪಾಲ ಭಾರದ್ವಾಜ್ ಭಾಗವಹಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry