ಭಾನುವಾರ, ಆಗಸ್ಟ್ 18, 2019
23 °C

ಸುವ್ಯವಸ್ಥಿತ ಚರಂಡಿ ಕಲ್ಪಿಸಿ

Published:
Updated:

ಲಗ್ಗೆರೆ ವಾರ್ಡ್ ಸಂಖ್ಯೆ 27ರಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಚರಂಡಿ ವ್ಯವಸ್ಥೆ ಅವ್ಯವಸ್ಥೆಯಿಂದ ಕೂಡಿರುವ ಕಾರಣ ಮಳೆ ಬಂದಾಗ ರಸ್ತೆಯ ಕಸ, ಗಲೀಜು ಎಲ್ಲವೂ ಮನೆ ಮುಂದೆ ಬಂದು ನಿಂತುಕೊಳ್ಳುತ್ತದೆ. ಇದರಿಂದಾಗಿ ನಾಗರಿಕರು ಕೆಟ್ಟ ವಾಸನೆ ಸೇವಿಸುತ್ತಾ ಬದುಕಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಕುರಿತು ಹಲವು ಬಾರಿ ಬಿಬಿಎಂಪಿ ಕಚೇರಿಗೆ ದೂರು ಕೊಟ್ಟರೂ ಅಧಿಕಾರಿಗಳು ಸ್ಪಂದಿಸಿಲ್ಲ.ಕ್ರಮ ಕೈಗೊಂಡಿಲ್ಲ. ಕಸ ತುಂಬಿಕೊಂಡು ಹೋಗುವ ಬಿಬಿಎಂಪಿ ವಾಹನ ಇಲ್ಲಿಗೆ ವಾರಕ್ಕೋ ಅಥವಾ ಹತ್ತು ದಿನಕ್ಕೊಮ್ಮೆ ಮಾತ್ರ ಬರುತ್ತದೆ. ಬಿಬಿಎಂಪಿ ಅಧಿಕಾರಿಗಳು ಇನ್ನಾದರೂ ಚರಂಡಿ ಸುವ್ಯವಸ್ಥೆ ಮತ್ತು ಕಸ ವಿಲೇವಾರಿಯನ್ನು ಸಮರ್ಪಕವಾಗಿ ನಿಭಾಯಿಸುವತ್ತ ಗಮನ ಹರಿಸಲಿ. 

 

Post Comments (+)