ಸುಶಾಂತ್‌ಸಿಂಗ್ ಸಂಭಾವನೆ 20 ರೂಪಾಯಿ!

7

ಸುಶಾಂತ್‌ಸಿಂಗ್ ಸಂಭಾವನೆ 20 ರೂಪಾಯಿ!

Published:
Updated:
ಸುಶಾಂತ್‌ಸಿಂಗ್ ಸಂಭಾವನೆ 20 ರೂಪಾಯಿ!

ರಾಜಕುಮಾರ್ ಹಿರಾನಿ ಅವರ ಚಿತ್ರ `ಪೀಕೆ'ಗೆ ಸುಶಾಂತ್ ಸಿಂಗ್ ತೆಗೆದುಕೊಂಡಿರುವ ಸಂಭಾವನೆ ಎಷ್ಟು ಗೊತ್ತೆ? ಕೇವಲ 20 ರೂಪಾಯಿ. ರಾಜಕುಮಾರ್ ಹಿರಾನಿ ಸುಶಾಂತ್‌ಸಿಂಗ್ ಅವರನ್ನು ಸಂಪರ್ಕಿಸಿದಾಗ, ಸುಶಾಂತ್ ಸಹಿ ಹಾಕಲು ಒಪ್ಪಿದರು. ಸಹಿ ಹಾಕುವಾಗ ಏನಾದರೂ ಕೊಡಲೇಬೇಕು ಎಂಬ ಸಂಪ್ರದಾಯ ಹಿರಾನಿ ಅವರದ್ದಂತೆ.ಸುಶಾಂತ್‌ಗೆ ಆಗ ಹಿರಾನಿ ತಮ್ಮ ಜೇಬಿನಿಂದ 20 ರೂಪಾಯಿ ತೆಗೆದುಕೊಟ್ಟರು. ಅದನ್ನೇ ಸುಶಾಂತ್ ಲ್ಯಾಮಿನೇಶನ್ ಮಾಡಿಸಿ, ತಮ್ಮ ಮನೆಯಲ್ಲಿ ತೂಗಿಹಾಕಿಕೊಂಡಿದ್ದಾರಂತೆ. ಇದು ಹಿರಾನಿ ಬಗೆಗಿರುವ ತಮ್ಮ ಅಭಿಮಾನ ಮತ್ತು ಆರಾಧನೆಯನ್ನು ತೋರಿಸುತ್ತದೆ ಎಂದು ಸುಶಾಂತ್ ಹೇಳಿದ್ದಾರೆ.ಆದರೆ `ಪೀಕೆ' ಚಿತ್ರದಲ್ಲಿ ನಟಿಸುತ್ತಿರುವ ಅನುಷ್ಕಾ ಶರ್ಮಾ ಸುಶಾಂತ್‌ಗೆ ಅತಿ ಚಿಕ್ಕ ಪಾತ್ರವನ್ನು ನೀಡಲಾಗಿದೆ. ಕೇವಲ 8 ದಿನಗಳ ಕೆಲಸವಾದರೆ ಸಾಕು ಎಂದಿದ್ದೇ ಇದೀಗ ವಿವಾದವಾಗಿದೆ.

`ಅನುಷ್ಕಾ ಶರ್ಮಾ ತಮ್ಮ ಸಹನಟ, ನಟಿಯರ ಕೆಲಸದ ಬಗ್ಗೆ ಅಥವಾ ಪಾತ್ರದ ಮಹತ್ವದ ಬಗ್ಗೆ ಟೀಕಿಸುವಷ್ಟು ದೊಡ್ಡವರಾಗಿದ್ದಾರೆಯೇ ಎಂಬುದು ಸುಶಾಂತ್ ಪ್ರಶ್ನೆಯಾಗಿದೆ.

ಒಂದು ಸಿನಿಮಾದಲ್ಲಿ ಪ್ರತಿಯೊಂದು ಪಾತ್ರಕ್ಕೂ ತನ್ನದೇ ಆದ ತೂಕವಿರುತ್ತದೆ. ಇಷ್ಟಕ್ಕೂ ನನ್ನ ಪಾತ್ರದ ಉದ್ದಗಲ, ಆಳವನ್ನು ತೀರ್ಮಾನಿಸಲು ಅನುಷ್ಕಾ ಯಾರು? ಅಮೀರ್ ಖಾನ್ ಹೊರತು ಪಡಿಸಿದರೆ, ಪೀಕೆ ಚಿತ್ರದ ಇಡಿಯಾದ ಸ್ಕ್ರಿಪ್ಟ್ ಅನ್ನು ಯಾರೂ ಓದಿಲ್ಲ'. ಹಾಗಿರುವಾಗ ಇಂಥ ಟೀಕೆಗಳು ಬೇಕಿರಲಿಲ್ಲ ಎನ್ನುವುದು ಸುಶಾಂತ್ ಅಭಿಪ್ರಾಯವಾಗಿದೆ.ಯಶ್ ರಾಜ್ ಸಿನಿಮಾದಲ್ಲಿ ಕೆಲಸ ಮಾಡುವಾಗಲೇ ರಾಜಕುಮಾರ್ ಹಿರಾನಿ ಈ ಚಿತ್ರದ ಪ್ರಸ್ತಾಪವನ್ನು ಸುಶಾಂತ್ ಮುಂದಿರಿಸಿದ್ದರು. ಸುಶಾಂತ್ ಮರುಮಾತಿಲ್ಲದೆ ಒಪ್ಪಿಗೆ ಸೂಚಿಸಿದ್ದರು. ಹಿರಾನಿ ಮೇಲಿಂದ ಮೇಲೆ, `ಇದೊಂದು ಚಿಕ್ಕ ಪಾತ್ರ ಮಾಡಲು ಇಷ್ಟವಿದೆಯೇ' ಎಂದು ಕೇಳಿದ್ದರು, ಎಚ್ಚರಿಸಿದ್ದರು. ಆದರೆ ಸುಶಾಂತ್ ಹಿರಾನಿ ಅವರ ಅಭಿಮಾನಿಯಾಗಿರುವುದರಿಂದಲೇ ಈ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದರು.`ಹಿರಾನಿ ಹೇಳಿದರೆ, ಫ್ರೇಮಿನಲ್ಲಿ ಒಂದೆಡೆಯಿಂದ ಇನ್ನೊಂದೆಡೆ ನಡೆಯಲೂ ಹೇಳಿದರೂ ಒಪ್ಪಿಕೊಳ್ಳುತ್ತೇನೆ' ಎಂದಿದ್ದರು ಎಂದು ಸುಶಾಂತ್‌ನ ನಿಕಟವರ್ತಿಗಳು ಹೇಳುತ್ತಾರೆ. ಇಷ್ಟಕ್ಕೂ `ಪೀಕೆ' ಚಿತ್ರದ ಆರಂಭದಲ್ಲಿ ಸುಶಾಂತ್ ಕಾಣಿಸಿಕೊಳ್ಳುತ್ತಾರೆ. ಮತ್ತೆ ಅವರ ಮರುಪ್ರವೇಶ ಆಗುವುದು ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ! ಹೀಗೆ ಬಂದು ಹೋಗುವ ಪಾತ್ರದ ಬಗ್ಗೆ ಅನುಷ್ಕಾ ಮಾತನಾಡಿದ್ದೇ ಸುಶಾಂತ್ ಅಸಮಾಧಾನಕ್ಕೆ ಕಾರಣವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry