ಸುಶಿಕ್ಷಿತರಲ್ಲಿ ಪ್ರಾಮಾಣಿಕತೆ ಕೊರತೆ

7
ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಆತಂಕ

ಸುಶಿಕ್ಷಿತರಲ್ಲಿ ಪ್ರಾಮಾಣಿಕತೆ ಕೊರತೆ

Published:
Updated:

ಬೆಂಗಳೂರು: ‘ದೇಶದಲ್ಲಿ ಸಾಕ್ಷರತೆ ಪ್ರಮಾಣ ಕಡಿಮೆ ಇದ್ದಾಗ ನ್ಯಾಯ ಹಾಗೂ ಪ್ರಾಮಾಣಿಕತೆ ಇತ್ತು. ಆದರೆ  ಸುಶಿಕ್ಷಿತರ ಪ್ರಮಾಣ ಹೆಚ್ಚಾ ಗುತ್ತಿದ್ದಂತೆ ವಂಚನೆ, ಕಳ್ಳತನ, ಅಪ್ರಾಮಾಣಿಕತೆ ತಾಂಡವವಾಡುತ್ತಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಆತಂಕ ವ್ಯಕ್ತಪಡಿಸಿದರು.49ನೇ ಅಂತರರಾಷ್ಟ್ರೀಯ ಸಾಕ್ಷರತಾ ಸಪ್ತಾಹದ ಅಂಗವಾಗಿ ರಾಜ್ಯ ಸಾಕ್ಷರತಾ ವಿಷನ್‌ ಪ್ರಾಧಿಕಾರ ಮತ್ತು ಲೋಕ ಶಿಕ್ಷಣ ನಿರ್ದೇಶ ನಾಲಯ ಜಂಟಿಯಾಗಿ ಶುಕ್ರವಾರ ನಗರದಲ್ಲಿ ಏರ್ಪಡಿಸಿದ್ದ ಸಾಕ್ಷರತಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.‘ಹೆಚ್ಚಿನ ಸುಶಿಕ್ಷಿತರಲ್ಲಿ ಸಾಮಾಜಿಕ ಕಳಕಳಿ ಹಾಗೂ ಪ್ರಾಮಾಣಿಕತೆ ಕಡಿಮೆಯಾ ಗುತ್ತಿರುವುದು ಅಪಾಯಕಾರಿ ಬೆಳವಣಿಗೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಉತ್ತಮ ಮೌಲ್ಯಗಳನ್ನು ಬೋಧಿಸುವ  ಅವಶ್ಯಕತೆ  ಹೆಚ್ಚಾಗಿದೆ’ ಎಂದರು.‘ದೇಶ ಮತ್ತು ರಾಜ್ಯದ ಆಡಳಿತ ವ್ಯವಸ್ಥೆಯನ್ನು ನಡೆಸುವವರಲ್ಲಿ ಮತ್ತು ಅಧಿಕಾರಿ ವರ್ಗದಲ್ಲಿ ಶೇಕಡ 90 ರಷ್ಟು  ಮಂದಿ ವಿದ್ಯಾವಂತರೇ ಇದ್ದಾರೆ. ಆದರೆ ಇವರಲ್ಲೇ ಹೆಚ್ಚಿನವರು ದೇಶದ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.ಧರ್ಮ, ಜಾತಿ, ಭಾಷೆ ಹಾಗೂ ಅಂತಸ್ತಿನ ಆಧಾರದ ಮೇಲೆ ಮಕ್ಕಳ ನಡುವೆ ತಾರತಮ್ಯದ ಗೋಡೆಯನ್ನು ನಿರ್ಮಿಸಬಾರದು. ಬದಲಾಗಿ ಎಲ್ಲ ಹೃದಯಗಳನ್ನು ಒಂದು ಮಾಡುವ ನಿಟ್ಟಿನಲ್ಲಿ ಮಕ್ಕಳಿಗೆ ತಿಳವಳಿಕೆ ನೀಡಬೇಕಿದೆ ಎಂದು ಸಲಹೆ ನೀಡಿದರು.ಯಾವುದೇ ಯೋಜನೆಗಳು ಕೇವಲ ಸರ್ಕಾರದ ಹಣದಿಂದ ಯಶಸ್ವಿ ಆಗುವುದಿಲ್ಲ. ಸರ್ಕಾರ ದೊಂದಿಗೆ  ಜನರು ಕೈ ಜೋಡಿಸಿದಾಗ ಮಾತ್ರ ಅದು ಯಶಸ್ವಿಯಾಗುತ್ತದೆ. ಅದಕ್ಕೆ ಈ ಸಾಕ್ಷರ ಭಾರತ್‌ ಕಾರ್ಯಕ್ರಮವೇ ಉತ್ತಮ ಉದಾಹರಣೆ ಎಂದರು.ಸಾಹಿತಿ ಕಮಲಾ ಹಂಪನಾ ಮಾತನಾಡಿ, ಅಜ್ಞಾನ ಕೂಪದಲ್ಲಿರುವ ಜನರನ್ನು ಬೆಳಕಿನೆಡೆಗೆ ತರುವ ಶಿಕ್ಷಕರು ಅಕ್ಷರಭ್ಯಾಸದ ಜೊತೆಗೆ

ಮನುಷ್ಯರ ನಡುವೆ ಆತ್ಮೀಯತೆ ಮತ್ತು ಪ್ರೀತಿಯ ಸೇತುವೆಯನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬೋಧನೆ ಮಾಡಬೇಕು ಎಂದು ಸಲಹೆ ನೀಡಿದರು.‘ನಾವು ನಮ್ಮ ಸಂಸ್ಕೃತಿಯಲ್ಲಿ ಮೊದಲು ಗಟ್ಟಿಯಾಗಿ ಬೇರೂರಬೇಕು. ನಂತರ ಇತರೆ ದೇಶ ಗಳ ಸಂಸ್ಕೃತಿಯನ್ನು ಪೂರಕವಾಗಿ ಸ್ವೀಕರಿಸಬೇಕು. ಆಗ ವಿಶ್ವಮಾನವರಾಗಲು ಸಾಧ್ಯ’ ಎಂದರು.  ‘ಬಹಳ ಹಿಂದೆ ನಮ್ಮ ದೇಶದಲ್ಲಿನ ಕೆಲ ಸುಶಿ ಕ್ಷಿತರು  ಸಾವಿರಾರು ಅನಕ್ಷರಸ್ಥರನ್ನು  ವಂಚಿಸಿದ್ದ ಕಾರಣ, ನಮ್ಮ ದೇಶ ಬೆಳವಣಿಗೆಯಲ್ಲಿ ಇನ್ನೂ ಕುಂಟುತ್ತಿದೆ’ ಎಂದು ಅಭಿಪ್ರಾಯಪಟ್ಟರು..  ಇದೇ ಸಮಯದಲ್ಲಿ ಸಾಕ್ಷರತೆಯ ಸಂದೇಶವನ್ನು ಸಾರುವ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡ ಲಾಯಿತು. ನಂತರ ಸಾಕ್ಷರತಾ ಯೋಜನೆಗಾಗಿ ಶ್ರಮಿಸಿದ ಸ್ವಯಂ ಸೇವಕರು, ಪ್ರೇರಕರು, ಜಿಲ್ಲಾ ಮತ್ತು ತಾಲ್ಲೂಕು ಸಂಯೋಜಕರು ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯ ಕಾರ್ಯ ದರ್ಶಿಗಳು ಮತ್ತು ಅಧಿಕಾರಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.‘ಲಿಖಿತ ಮನವಿ ಸಲ್ಲಿಸಿ’

‘ಶಿಕ್ಷಕರ ವರ್ಗಾವಣೆ ಹಾಗೂ ಬಡ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಮುಂಬರುವ ಏಪ್ರಿಲ್‌ ಹಾಗೂ ಮೇ ತಿಂಗಳಿನ ಒಳಗಾಗಿ ಬಗೆ ಹರಿಸಲಾಗುವುದು. ಜೊತೆಗೆ ಶಿಕ್ಷಕರ ಬೇಡಿಕೆಗಳಲ್ಲಿ ಶೇಕಡ 50ರಷ್ಟನ್ನು ಈಡೇರಿಸಲು ಪ್ರಾಮಾಣಿಕ  ಪ್ರಯತ್ನ ಮಾಡುತ್ತೇನೆ.

ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ಬದಲಾ ವಣೆಗಳು ಬೇಕಾದಲ್ಲಿ ನೇರವಾಗಿ ನನಗೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿ.

ಅದು ಸೂಕ್ತ ವೆನಿಸಿದರೆ ಅದನ್ನು ವ್ಯವಸ್ಥೆಯಲ್ಲಿ ಅಳವಡಿಸಲು ಪ್ರಯತ್ನಿಸುತ್ತೇನೆ’.

- ಕಿಮ್ಮನೆ ರತ್ನಾಕರ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry