ಭಾನುವಾರ, ಜನವರಿ 19, 2020
23 °C

ಸುಶೀಲ್‌ ಮೋದಿ ವಿರುದ್ಧ ತನಿಖೆಗೆ ಸರ್ಕಾರ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಟ್ನಾ (ಪಿಟಿಐ): ಮಾಜಿ ಮಿತ್ರರಾದ ಬಿಜೆಪಿ ಮತ್ತು ಜೆಡಿಯು ನಡುವಿನ ವೈಮನಸ್ಸು ಹೆಚ್ಚುತ್ತಲೇ ಸಾಗಿದೆ. ಬಿಹಾರದಲ್ಲಿ ಎರಡು ಪಕ್ಷಗಳ ಮೈತ್ರಿ ಸರ್ಕಾರ ಇದ್ದ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸುಶೀಲ್‌ ಕುಮಾರ್‌ ಮೋದಿ ಹಣಕಾಸು ಸಚಿವರಾಗಿದ್ದರು. ಈ ಅವಧಿಯಲ್ಲಿ ವ್ಯಾಟ್‌ ಇಳಿಕೆಯಿಂದಾಗಿ ಸರ್ಕಾರಕ್ಕೆ 50 ಕೋಟಿ ನಷ್ಟವಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡುವುದಾಗಿ ಬಿಹಾರ ಸರ್ಕಾರ ಹೇಳಿದೆ.ಸ್ವೇಚ್ಛೆಯಿಂದ ವ್ಯಾಟ್‌ ಇಳಿಕೆ ಮಾಡಿರುವುದರಿಂದ ಬೊಕ್ಕಸಕ್ಕೆ 50 ಕೋಟಿ ರೂ. ನಷ್ಟವಾಗಿದೆ ಎಂಬ ಕಾಂಗ್ರೆಸ್‌ ಸಂಸದೀಯ ಪಕ್ಷದ ಮುಖಂಡ ಸದಾನಂದ ಸಿಂಗ್‌ ಅವರ ಗಮನ ಸೆಳೆಯುವ ಗೊತ್ತುವಳಿಗೆ ಶೀಘ್ರವೇ ತನಿಖೆ ನಡೆಸುವುದಾಗಿ ಉತ್ತರ ನೀಡಲಾಗಿದೆ. ಸದನದಲ್ಲಿ ಈ ಉತ್ತರ ನೀಡುವ ಸಂದರ್ಭದಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)