ಶುಕ್ರವಾರ, ನವೆಂಬರ್ 22, 2019
24 °C
ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್

ಸುಶೀಲ್ ಸ್ಪರ್ಧೆ ಅನುಮಾನ

Published:
Updated:

ನವದೆಹಲಿ (ಪಿಟಿಐ): ಭುಜ ಮತ್ತು ಮೊಣಕಾಲು ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಭಾರತದ ಕುಸ್ತಿಪಟುಗಳಾದ ಸುಶೀಲ್ ಕುಮಾರ್ ಮತ್ತು ಯೋಗೇಶ್ವರ ದತ್, ಏಪ್ರಿಲ್ 18ರಿಂದ 22ರವರೆಗೆ ಇಲ್ಲಿ ಆಯೋಜಿಸಲಾಗಿರುವ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವುದು ಅನುಮಾನವಾಗಿದೆ.ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಯೋಗೇಶ್ವರ ದತ್, `ನಾನು ಗಾಯದ ಸಮಸ್ಯೆಯಿಂದ ಗುಣಮುಖನಾಗುತ್ತಿದ್ದೇನೆ.ಟೂರ್ನಿ ಆರಂಭಕ್ಕಿಂತ ಒಂದೆರಡು ದಿನ ಮೊದಲು ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಒಳಗಾಗುತ್ತೇನೆ. ಅದರ ಆಧಾರದಲ್ಲಿ ತರಬೇತುದಾರರು ಮತ್ತು ಕುಸ್ತಿ ಫೆಡರೇಷನ್ ಅಧಿಕಾರಿಗಳು ನಾನು ಭಾಗವಹಿಸುವ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ. 60 ಕೆ.ಜಿ ವಿಭಾಗದಲ್ಲಿ ನಾನು ಸ್ಪರ್ಧಿಸದಿದ್ದರೆ ಬಜರಂಗ್ ಸ್ಪರ್ಧಿಸಲಿದ್ದಾರೆ' ಎಂದರು.ರಾಷ್ಟ್ರೀಯ ಮುಖ್ಯ ತರಬೇತುದಾರ ವಿನೋದ್ ಕುಮಾರ್, `ಸೆಪ್ಟೆಂಬರ್‌ನಲ್ಲಿ ಹಂಗೆರಿಯಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಷಿಪ್ ಅವರಿಗೆ ಬಹಳ ಮುಖ್ಯವಾದದ್ದು. ಹೀಗಾಗಿ ಅವರು ತಮ್ಮ ಗಾಯದ ಸಮಸ್ಯೆಯಿಂದ ಗುಣಮುಖರಾಗುವತ್ತ ಗಮನ ಹರಿಸಿದ್ದಾರೆ' ಎಂದರು.

ಪ್ರತಿಕ್ರಿಯಿಸಿ (+)