ಸುಶ್ಮಿತಾ ರಂಗಪ್ರವೇಶ

7

ಸುಶ್ಮಿತಾ ರಂಗಪ್ರವೇಶ

Published:
Updated:

ಎಂ.ಆರ್.ಕೃಷ್ಣಮೂರ್ತಿ ಅವರ ಶಿಷ್ಯೆ ವಿ.ಜಿ.ಸುಶ್ಮಿತಾ ಅವರ ರಂಗಪ್ರವೇಶ ಶುಕ್ರವಾರ ನಡೆಯಲಿದೆ.

ತನ್ನ ಎಂಟನೇ ವಯಸ್ಸಿನಿಂದಲೇ ಭರತನಾಟ್ಯ ಅಭ್ಯಾಸ ಆರಂಭಿಸಿದ ಸುಶ್ಮಿತಾ ಹನ್ನೆರಡು ವರ್ಷಗಳ ಬಳಿಕ ರಂಗಪ್ರವೇಶಕ್ಕೆ ಸಿದ್ಧರಾಗಿದ್ದಾರೆ. `ಕಲಾಕ್ಷಿತಿ~ ನೃತ್ಯ ತಂಡದ ಮೂಲಕ ಈಗಾಗಲೇ ಸಾಕಷ್ಟು ಪ್ರದರ್ಶನ ನೀಡಿರುವ ಇವರು ಸೀನಿಯರ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯೊಂದಿಗೆ ಉತ್ತೀರ್ಣರಾದವರು. 

ಚಿತ್ರಕಲೆಯಲ್ಲೂ ಆಸಕ್ತಿ ಬೆಳೆಸಿಕೊಂಡಿರುವ ಈಕೆ ಇದೀಗ ಬಿಎನ್‌ಎಂ ಕಾಲೇಜಿನಲ್ಲಲಿ ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಶನ್‌ನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾರೆ. ತಾಯಿ ಲಕ್ಷ್ಮಿ ಹಾಗೂ ತಂದೆ ಗೋಪಾಲಕೃಷ್ಣ ಶೆಟ್ಟಿ ಅವರ ಪ್ರೋತ್ಸಾಹವೂ ಸುಶ್ಮಿತಾ ಸಾಧನೆ ಹಿಂದಿದೆ.

ಜೆ.ಸಿ.ರಸ್ತೆಯ ಎಡಿಎ ರಂಗಮಂದಿರದಲ್ಲಿ ಸಂಜೆ 6ಕ್ಕೆ ರಂಗಪ್ರವೇಶ ಕಾರ್ಯಕ್ರಮ ನಡೆಯಲಿದ್ದು ಬಿಎನ್‌ಎಂ ಕಾಲೇಜಿನ ಟ್ರಸ್ಟಿ ಆರ್.ನಾರಾಯಣ ರಾವ್ ಅತಿಥಿಗಳಾಗಿ ಪಾಲ್ಗೊಳ್ಳುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry