ಸುಷ್ಮಾ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂ ಸ್ವರ್ಶ

ಬುಧವಾರ, ಜೂಲೈ 17, 2019
30 °C

ಸುಷ್ಮಾ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂ ಸ್ವರ್ಶ

Published:
Updated:

ನವದೆಹಲಿ(ಪಿಟಿಐ):  ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು ದೆಹಲಿಯಿಂದ ಉಜ್ಜಯನಿಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದರಿಂದ ವಿಮಾನವನ್ನು ಜೈಪುರ ನಿಲ್ದಾಣದಲ್ಲಿ ತುರ್ತು ಭೂ ಸ್ವರ್ಶ ಮಾಡಲಾಯಿತು.ವಿಮಾನದ ಬಲ ಎಂಜಿನ್‌ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದರಿಂದ ಜೈಪುರದಲ್ಲಿ ಇಳಿಸಲಾಯಿತು ಎಂದು ಸುಷ್ಮಾ  ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಬದಲಿ ವಿಮಾನದಲ್ಲಿ ಇಂದೋರ್‌ಗೆ ತೆರಳಿದ ಸುಷ್ಮಾ ಅಲ್ಲಿಂದ ಉಜ್ಜಯನಿಗೆ ತೆರಳಿದರು.  ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಯುತ್ತಿದ್ದು, ವಿದಿಶಾದ ಸಂಸದರಾಗಿರುವ ಸುಷ್ಮಾ, ಚುನಾವಣಾ ಸಂಬಂಧಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry