ಶನಿವಾರ, ಮೇ 8, 2021
19 °C

ಸುಸಜ್ಜಿತ ವಸತಿ: ವಕೀಲ್ ಹೆಗ್ಗಳಿಕೆ

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು ನಗರದ ವಿಶೇಷತೆ ಏನೆಂದರೆ,  ರೂ 5 ಲಕ್ಷ ಬೆಲೆಯ ಕಡಿಮೆ ವೆಚ್ಚದ ಮನೆಗಳಿಂದ ಹಿಡಿದು ದುಬಾರಿ ರೂ 5 ಕೋಟಿಗಳಷ್ಟು ವೆಚ್ಚದ ಮನೆಗಳ ನಿರ್ಮಾಣ, ಮಾರಾಟ ಇಲ್ಲಿ ಸಾಧ್ಯ ಇದೆ.

 

ಬಡವರ ಮತ್ತು ಶ್ರೀಮಂತರ ಅಗತ್ಯಗಳನ್ನೆಲ್ಲ ಈಡೇರಿಸುವ ಸರಳ, ಅಗ್ಗದ ಮನೆಗಳು, ಭವ್ಯ, ವಿಲಾಸಿ, ಆಧುನಿಕ ಜೀವನ ಶೈಲಿ ಮತ್ತು ವಾಸ್ತು ವಿನ್ಯಾಸಕ್ಕೆ ಪೂರಕವಾದ ಸಕಲ ಸೌಲಭ್ಯ ಸಜ್ಜಿತ ಅಪಾರ್ಟ್‌ಮೆಂಟ್, ಸ್ವತಂತ್ರ ಮನೆ (ವಿಲ್ಲಾ), ಮೂಲ ಸೌಕರ್ಯಗಳು ಇರುವ  ಸುಸಜ್ಜಿತ ನಗರ (ಟೌನ್‌ಶಿಪ್), ಗಗನಚುಂಬಿ ಅಪಾರ್ಟ್‌ಮೆಂಟ್‌ಗಳೆಲ್ಲ ಇಲ್ಲಿ ಇವೆ.ಕನಿಷ್ಠ ಮತ್ತು ಗರಿಷ್ಠ ಬೆಲೆಯ ಮನೆ, ಅಪಾರ್ಟ್‌ಮೆಂಟ್‌ಗಳ ಮಧ್ಯೆ ಮಧ್ಯಮ ವರ್ಗದವರಿಗೆ ಕೈಗೆಟುಕುವ ಬೆಲೆಯ ರೂ 20 ಲಕ್ಷ ಆಸುಪಾಸಿ ಬೆಲೆಯ ಮನೆಗಳ ನಿರ್ಮಾಣವೂ ಸಾಧ್ಯವಿದೆ.ಇಂತಹ ಸಾಧ್ಯತೆಗಳನ್ನು ನಿಜ ಮಾಡುವ ನಿಟ್ಟಿನಲ್ಲಿ ತೊಡಗಿರುವ ನಗರದ ರಿಯಲ್ ಎಸ್ಟೇಟ್ ಸಂಸ್ಥೆಗಳ ಪೈಕಿ, ವಕೀಲ್ ಹೌಸಿಂಗ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ತನ್ನದೇ ಛಾಪು ಮೂಡಿಸಿದೆ. ದಶಕದ ಹಿಂದೆ  ಮೋಸಿನ್ ಅಲಿ ವಕೀಲ್ ಅವರಿಂದ ಸ್ಥಾಪಿತಗೊಂಡಿರುವ `ವಿಎಚ್‌ಡಿಸಿ~, ನಗರದ ರಿಯಲ್ ಎಸ್ಟೇಟ್ ರಂಗದಲ್ಲಿ ನಿವೇಶನ ಅಭಿವೃದ್ಧಿ, ಮನೆ, ಅಪಾರ್ಟ್‌ಮೆಂಟ್ಸ್, ಟೌನ್‌ಶಿಪ್ ಯೋಜನೆಗಳನ್ನು  ನಿಖರವಾಗಿ ಯೋಜಿತ ರೀತಿಯಲ್ಲಿ ಕಾರ್ಯಗತಗೊಳಿಸುವ ಮೂಲಕ, ಗುಣಮಟ್ಟದ ವಸತಿ ಯೋಜನೆಯ  ಕನಸು ನನಸಾಗಿಸಲು ಶ್ರಮಿಸುತ್ತಿದೆ.ಮನೆ ಮಾಲೀಕರು ತಮ್ಮ ಕನಸಿನ ಮನೆಯಲ್ಲಿ ಹೆಮ್ಮೆ, ಸಂತಸ, ಆರಾಮ, ನೆಮ್ಮದಿಯಿಂದ ನೆಲೆಸಬೇಕು ಎನ್ನುವ ಮೂಲ ಉದ್ದೇಶ ಸಾಕಾರಗೊಳಿಸುವುದು `ವಿಎಚ್‌ಡಿಸಿ~ಯ ಮೂಲ ಉದ್ದೇಶವಾಗಿದೆ. ಈ ತತ್ವಗಳಿಗೆ ಅನುಗುಣವಾಗಿಯೇ ವಸತಿ ಯೋಜನೆಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ  ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಎಚ್. ಆರ್. ಗಿರೀಶ್ ಅಭಿಪ್ರಾಯಪಡುತ್ತಾರೆ.ಕಾನೂನು ಕಟ್ಟಲೆಗಳಿಂದ ಮುಕ್ತವಾದ, ಭೂಮಿಯ ಶುದ್ಧ ಕ್ರಯಪತ್ರ, ಕೈಗೆಟುಕುವ ಬೆಲೆ, ನಾಗರಿಕ ಮೂಲ ಸೌಕರ್ಯ, ಮತ್ತಿತರ ಸೇವೆಗಳಿಗೆ ಹೊಸ ವಾಸಸ್ಥಳದಲ್ಲಿ ಮೂಲ ಸೌಕರ್ಯಗಳು ಇರಲೇಬೇಕು ಎನ್ನುವುದಕ್ಕೆ ಸಂಸ್ಥೆ ಮಹತ್ವ ನೀಡುತ್ತದೆ.

ಆರೋಗ್ಯ ಸೇವೆ, ಶಿಕ್ಷಣ, ಮನರಂಜನೆ, ನಾಗರಿಕ ಸೇವೆ ಮುಂತಾದವು  ಉಪನಗರ ಪ್ರದೇಶಗಳಲ್ಲಿ ಎಲ್ಲವೂ ಒಂದೆಡೆಯೇ ಲಭ್ಯವಾಗುವುದು ದುರ್ಲಭ.

 

ಹೊಸ ಸ್ಥಳದಲ್ಲಿ ಮನೆ, ಅಪಾರ್ಟ್‌ಮೆಂಟ್ ಖರೀದಿದಾರರಿಗೆ ಕನಿಷ್ಠ ಮೂಲ ಸೌಕರ್ಯಗಳನ್ನೆಲ್ಲ ಒದಗಿಸಲು ಕಾಳಜಿ ವಹಿಸುವ ಗೃಹ ನಿರ್ಮಾಣ ಸಂಸ್ಥೆಯ ಯೋಜನೆಗಳತ್ತ ಖರೀದಿದಾರರು ಸಹಜವಾಗಿಯೇ ಆಕರ್ಷಿಸುತ್ತಾರೆ. ಮನೆ ಖರೀದಿಸುವವರ ಗಮನ ಸೆಳೆಯುವಂತಹ ಗೃಹ ನಿರ್ಮಾಣ ಸಂಸ್ಥೆಗಳಲ್ಲಿ `ವಿಎಚ್‌ಡಿಸಿ~ ಕೂಡ ಮುಂಚೂಣಿಯಲ್ಲಿ ಇದೆ ಎಂದು ಅವರು ಹೇಳುತ್ತಾರೆ.ವಕೀಲ್ ಸ್ಯಾಟಲೈಟ್ ಟೌನ್‌ಶಿಪ್, ವಕೀಲ್ ಗಾರ್ಡನ್ ಸಿಟಿ, ವಕೀಲ್ ಗಾರ್ಡೆನಿಯಾ, ವಕೀಲ್ ಮರೀನಾ, ವಕೀಲ್ ಕ್ಲಬ್ ಕ್ಲಾಸ್, ವಕೀಲ್ ವಿಸ್ಪರಿಂಗ್ ವೂಡ್ಸ್, ವಕೀಲ್ ಹ್ಯಾಮ್ಲೆಟ್, ವಕೀಲ್ ಎನ್‌ಕಾಸಾ, ವಕೀಲ್ ಹೊಸೂರ್ ಹಿಲ್ಸ್ ಮತ್ತು ವಕೀಲ್ ಟೌನ್‌ಶಿಪ್ - ಸಂಸ್ಥೆಯ ಪ್ರಮುಖ ಯೋಜನೆಗಳಾಗಿವೆ.ಸಂಸ್ಥೆಯ ವಸತಿ ಯೋಜನೆಗಳಲ್ಲಿ ಮಳೆ ನೀರು ಸಂಗ್ರಹ, ನೀರಿನ ಮರು ಬಳಕೆ ಮತ್ತಿತರ `ಪರಿಸರ ಸ್ನೇಹಿ~ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಾಯು ವಿಹಾರ, ವ್ಯಾಯಾಮ, ಮಕ್ಕಳ ಕ್ರೀಡೆ, ಭದ್ರತೆ ಮುಂತಾದ ಸೌಲಭ್ಯಗಳು ಇಲ್ಲಿಯ ನಿವಾಸಿಗಳಿಗೆ ದೊರೆಯಲಿವೆ.

 

ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ವಾಸ್ತು ಅಗತ್ಯಗಳನ್ನೂ  ಒದಗಿಸಲಾಗುವುದು.

 ಸ್ವತಂತ್ರ ಮನೆಗಳ (ವಿಲ್ಲಾ)  ಬೆಲೆ  ರೂ 40 ಲಕ್ಷಗಳಿಂದ  ರೂ 60 ಲಕ್ಷದವರೆಗೆ ಇದೆ. ವಿಲಾಸಿ `ವಿಲ್ಲಾ~ ಬೆಲೆ ಗರಿಷ್ಠ ರೂ 75 ಲಕ್ಷದವರೆಗೆ ಇದೆ.ಸಂಸ್ಥೆಯ ವಸತಿ ನಿರ್ಮಾಣ ಯೋಜನೆಗಳೆಲ್ಲ ನಗರಕ್ಕೆ ಹೆಚ್ಚು ಹತ್ತಿರ ಇದ್ದು, ಉತ್ತಮ ಸಾರಿಗೆ ಸಂಪರ್ಕ ಸೌಲಭ್ಯ ಹೊಂದಿವೆ. ಕೈಗೆತ್ತಿಕೊಂಡಿರುವ ವಸತಿ ಯೋಜನೆಗಳಿಗೆ ಪೂರ್ಣ ಗಮನ ನೀಡಿ ಪೂರ್ಣಗೊಳಿಸಿದ ನಂತರವೇ ಹೊಸ ಯೋಜನೆ ಹಮ್ಮಿಕೊಳ್ಳಲಾಗುತ್ತದೆ ಎಂದು  ಗಿರೀಶ್ ಸ್ಪಷ್ಟಪಡಿಸುತ್ತಾರೆ.

 

ದೆಹಲಿಗೆ ಗುರಗಾಂವ್ ಇದ್ದಂತೆ, ಬೆಂಗಳೂರಿಗೆ ಹೊಸೂರು ಇದೆ. ಇಲ್ಲಿ ಕೈಗೆತ್ತಿಕೊಂಡಿರುವ ಯೋಜಿತ ಪಟ್ಟಣ ನಿರ್ಮಾಣ ಯೋಜನೆ (ಟೌನ್‌ಶಿಪ್)- ಹೊಸ ಪರಿಕಲ್ಪನೆಯಾಗಿದೆ. ದಿನನಿತ್ಯದ ಬದುಕಿಗೆ ಅಗತ್ಯವಾಗಿರುವ ಸೌಲಭ್ಯಗಳನ್ನೆಲ್ಲ ಇಲ್ಲಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.ಸಂಸ್ಥೆಯ ನಿರ್ಮಾಣ ಚಟುವಟಿಕೆಯಲ್ಲಿ `ಪರಿಸರ ಸ್ನೇಹಿ~ ಸಾಮಗ್ರಿಗಳನ್ನೇ ಬಳಸಲಾಗುತ್ತಿದೆ. ಉಪ ಗುತ್ತಿಗೆ ನೀಡುವುದಿಲ್ಲ. ನಮ್ಮಲ್ಲಿ ಗುಣಮಟ್ಟ ಮುಖ್ಯ. ನಮ್ಮದೇ ಎಂಜಿನಿಯರಿಂಗ್ ತಂಡ, ಗುಣಮಟ್ಟ ತಂಡಗಳು ನಿರ್ಮಾಣ ಕಾಮಗಾರಿ ಮೇಲೆ ನಿಗಾ ಇಡುತ್ತವೆ ಎಂದು ಹೇಳುತ್ತಾರೆ.ಒಪ್ಪಂದದ ವೇಳೆಗೆ ಒಪ್ಪಿಕೊಂಡ ಬೆಲೆಗೆ ಮನೆ, ಅಪಾರ್ಟ್‌ಮೆಂಟ್‌ಗಳನ್ನು ಮಾಲೀಕರಿಗೆ ಹಸ್ತಾಂತರ ಮಾಡಲಾಗುತ್ತದೆ. ವಹಿವಾಟಿನಲ್ಲಿ ಪಾರದರ್ಶಕತೆ ರೂಢಿಗೆ ತಂದಿದ್ದೇವೆ. ಕಟ್ಟಡ ನಿರ್ಮಾಣ ಸಾಮಗ್ರಿ ಪೂರೈಕೆದಾರರ ಜತೆ ದೀರ್ಘಾವಧಿ ಬಾಂಧವ್ಯ ಇರುವುದರಿಂದ  ಯೋಜನೆಗಳನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸಲಾಗುತ್ತಿದೆ.ಮನೆ ಖರೀದಿದಾರರು- ರಿಯಲ್ ಎಸ್ಟೇಟ್ ಸಂಸ್ಥೆಯ ಹಿನ್ನೆಲೆ, ಅವರ ಅನುಭವ, ಸಕಾಲಕ್ಕೆ ಹಂಚಿಕೆ ಮಾಡಿರುವ ಇತಿಹಾಸ ಎಲ್ಲವೂ ಪರಿಗಣಿಸಿ ನಿರ್ಧಾರಕ್ಕೆ ಬರಬೇಕು ಎಂದೂ ಗಿರೀಶ್ ಕಿವಿಮಾತು ಹೇಳುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.