ಸೋಮವಾರ, ಜೂನ್ 14, 2021
27 °C

ಸುಸ್ಥಿರ ನಗರದ ಭವಿಷ್ಯ, ಸಂಸ್ಕೃತಿ ಕೋರ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಡಿಯನ್ ಇನ್‌ಸ್ಟಿಟ್ಯೂಟ್ ಫಾರ್ ಹ್ಯುಮನ್ ಸೆಟ್ಲ್‌ಮೆಂಟ್ಸ್ (ಐಐಎಚ್‌ಎಸ್) ಮಾರ್ಚ್ 23 ಮತ್ತು 24ರಂದು ಬೆಂಗಳೂರಿನಲ್ಲಿ ಸಸ್ಟೇನೆಬಲ್ ಅರ್ಬನಿಸಂ ಇಂಟರ್‌ನ್ಯಾಷನಲ್ ಸಹಯೋಗದೊಂದಿಗೆ `ಸುಸ್ಥಿರ ನಗರದ ಭವಿಷ್ಯಗಳು: ಪರಂಪರೆ, ಸಂಸ್ಕೃತಿ ಮತ್ತು ಪರಿಸರ~  ಕುರಿತು ಕಿರು ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ.ಉತ್ತಮ ನಗರಗಳ ಅಭಿವೃದ್ಧಿ, ಸ್ಥಳ ಮತ್ತು ಸಮುದಾಯ ಆಧಾರಿತ ಕಾರ್ಯತಂತ್ರಗಳ ಬಗ್ಗೆ ಇಲ್ಲಿ ತಿಳಿಸಿಕೊಡಲಾಗುತ್ತದೆ. ಪರಂಪರೆ ಮತ್ತು ಸಂರಕ್ಷಣಾ ಯೋಜನೆಗಳಲ್ಲಿ ತೊಡಗಿಸಿಕೊಂಡ ವಾಸ್ತುಶಿಲ್ಪಿಗಳು ಹಾಗೂ ಯೋಜಕರು, ಯೋಜನಾ ವಿದ್ಯಾರ್ಥಿಗಳು, ಪ್ರವಾಸೋದ್ಯಮ ಅಧಿಕಾರಿಗಳು, ನಿರ್ವಾಹಕರು, ಆಡಳಿತಗಾರರು ಮತ್ತು ನಗರ ನಿರ್ವಹಣಾ ವೃತ್ತಿಪರರಿಗೆ ಇದು ಅನುಕೂಲ.ನ್ಯೂಯಾರ್ಕ್‌ನ ಕೊಲಂಬಿಯಾ ವಿವಿ ಅಧ್ಯಾಪಕರಾದ ಡಾ. ಜ್ಯೋತಿ ಹೊಸಗ್ರಹಾರ ಮತ್ತು ಇಂಟ್ಯಾಕ್‌ನ ಬೆಂಗಳೂರು ವಿಭಾಗದ ಸಂಚಾಲಕ ಡಾ. ಸತ್ಯಪ್ರಕಾಶ್ ವಾರಾಣಸಿ ಕೋರ್ಸ್ ನಡೆಸಿಕೊಡುತ್ತಾರೆ.ಮಾಹಿತಿಗೆ: http://www.iihs.co.in/­programmes/­pwp/suf/suf-march-2012/

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.