ಮಂಗಳವಾರ, ಏಪ್ರಿಲ್ 20, 2021
29 °C

ಸುಹಾಸ್ ಚಾಂಪಿಯನ್ ಆಫ್ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಸೆಂಟ್ರಲ್ ರೈಲ್ವೆಯ ಸುಹಾಸ್ ಕಾಮ್ಕರ್ ಶುಕ್ರವಾರ ರಾತ್ರಿ ಮುಕ್ತಾಯವಾದ 25ನೇ ಅಖಿಲ ಭಾರತ ರೈಲ್ವೆ ದೇಹದಾರ್ಢ್ಯ ಸ್ಪರ್ಧೆಯಲ್ಲಿ ‘ಚಾಂಪಿಯನ್ ಆಫ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಗದಗ ರಸ್ತೆಯ ಚಾಲುಕ್ಯ ಸಂಸ್ಥೆಯಲ್ಲಿ ಕಿಕ್ಕಿರಿದು ಸೇರಿದ್ದ ಜನರ ಮುಂದೆ ದೇಹದಾರ್ಢ್ಯ ಪ್ರದರ್ಶನ ನೀಡಿದ ಸುಹಾಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.ಆರು ಬಾರಿ ಮಿಸ್ಟರ್ ಇಂಡಿಯಾ ಗೆದು, ಮಿಸ್ಟರ್ ವರ್ಲ್ಡ್ ಚಾಂಪಿಯನ್‌ಷಿಪ್‌ನಲ್ಲಿ 6ನೇ ಸ್ಥಾನ ಗಳಿಸಿದ್ದ ಸುಹಾಸ್ ಹುಬ್ಬಳ್ಳಿಯಲ್ಲಿಯೂ ತಮ್ಮ ಪ್ರಾಬಲ್ಯ ಮೆರೆದರು. 80 ಕೆಜಿ ವಿಭಾಗದಲ್ಲಿ ಮೊದಲಿಗರಾದ ಅವರು ಫೈನಲ್‌ನಲ್ಲಿ ಘಟಾನುಘಟಿಗಳನ್ನು ಮೀರಿ ನಿಂತರು. ತಂಡ ವಿಭಾಗದಲ್ಲಿ 60 ಪಾಯಿಂಟ್ ಗಳಿಸಿದ ಸೌಥ್ ಈಸ್ಟರ್ನ್ ರೈಲ್ವೆ ಚಾಂಪಿಯನ್‌ಷಿಪ್ ಮತ್ತು 57 ಪಾಯಿಂಟ್ ಗಳಿಸಿದ ದಕ್ಷಿಣ ರೈಲ್ವೆ ರನ್ನರ್ಸ್ ಅಪ್ ಗಳಿಸಿತು.ಸಮಾರೋಪ ಸಮಾರಂಭದಲ್ಲಿ ನೈಋತ್ಯ ರೈಲ್ವೆ ಮುಖ್ಯ ಪ್ರಬಂಧಕ ಕುಲದೀಪ ಚತುರ್ವೇದಿ ಪ್ರಶಸ್ತಿ ವಿತರಿಸಿದರು. ಕೃಷ್ಣಮೂರ್ತಿ, ಎಸ್.ಕೆ. ಗುಪ್ತಾ ಮತ್ತಿತರರು ಹಾಜರಿದ್ದರು.

ಫಲಿತಾಂಶಗಳು:55 ಕೆಜಿ: ಸುಧಾಕರ (ಎಸ್‌ಇಅರ್)-1, ಶ್ರೀಪಾಯರೆಡ್ಡಿ (ಎಸ್‌ಇಆರ್)-2, ಅಲೋಕ್ ಚಕ್ರವರ್ತಿ -3; 60ಕೆಜಿ: ಅನೂಪ್ ರಾಜು (ಸದರ್ನ್)-1, ಕೋದಂಡರಾಮನ್ (ಐಸಿಎಫ್)-2, ಹನುಮಂತರೆಡ್ಡಿ (ಎಸ್‌ಇಆರ್)-3; 65ಕೆಜಿ:: ಯೋಗೇಶ್ -1, ಶ್ಯಾಮ್‌ಚೌಧರಿ-2, ಅನೀಲ ಪೂಜಾರಿ-3; 70ಕೆಜಿ: ಶಿವಕುಮಾರ (ನಾರ್ಥ)-1, ಅನಾಜ್ ಹುಸೇನ್ (ಸದರ್ನ್)-2, ಎಸ್.ಎಸ್. ಶಿವಕುಮಾರ-3; 75 ಕೆಜಿ: ಎನ್. ಸರ್ಬೋಸಿಂಗ್ (ಎಸ್‌ಇಆರ್)-1, ಸರವಣರಾಜ್ (ನೈಋತ್ಯ ರೈಲ್ವೆ)-2, ಜಿ. ದಳವಿ -3; 80: ಸುಹಾಸ್ ಕಾಮಕರ್ (ಸೆಂಟ್ರಲ್) -1, ರಾಜಶೇಖರ್ (ನೈಋತ್ಯ)-2, ಸುಪ್ರಸಿಂಗ್ ಕೋಲೆ -3; 85 ಕೆಜಿ: ಬಾಬ್ಬಿಸಿಂಗ್ (ಎನ್‌ಎಫ್‌ಆರ್)-1, ರಾಮನಿವಾಸ (ಎಸ್‌ಇಆರ್)-2, ಸತ್ಯನಾರಾಯಣ (ನೈಋತ್ಯ)-3;  90 ಕೆಜಿ: ರೆಕ್ಸ್ ವರ್ಗಿಸ್ (ಸದರ್ನ್)-1, ಪ್ರೀತಂಸಿಂಗ್ (ನೈಋತ್ಯ)-2, ಸನ್ಯಾಮಸಿಂಗ್ (ಎಸ್‌ಇಆರ್)-3;

100 ಕೆಜಿ: ಜಯಕುಮಾರ -1, ಕೆ. ಲೆವಿನ್ (ನೈಋತ್ಯ ರೈಲ್ವೆ) -2, ಅಮರೇಶ್ವರ-3; 100ಕೆಜಿ ಮೇಲ್ಟಟ್ಟು: ಜಾವೇದ್ ಅಲಿ ಖಾನ್ (ಎಸ್‌ಇಆರ್)-1, ದತ್ತಕುಮಾರ (ಸೆಂಟ್ರಲ್) -2, ದಿಲ್‌ಖುಷ್-3

ತಂಡ ಸಮಗ್ರ ಪ್ರಶಸ್ತಿ: ಸೌಥ್ ಈಸ್ಟರ್ನ್ ರೈಲ್ವೆ (60ಪಾಯಿಂಟ್);

ರನ್ನರ್ಸ್ ಅಪ್: ಸದರ್ನ್

ಸುಹಾಸ್ ಕಾಮ್ಕರ್ (ಸೆಂಟ್ರಲ್ ರೈಲ್ವೆ): ಚಾಂಪಿಯನ್ ಆಫ್ ದಿ ಚಾಂಪಿಯನ್.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.