ಸೂಕ್ತ ಚಿಕಿತ್ಸೆ ಗರ್ಭಿಣಿಯ ಹಕ್ಕು

7
ಐರ‌್ಲೆಂಡ್ ಸರ್ಕಾರದ ಸ್ಪಷ್ಟನೆ

ಸೂಕ್ತ ಚಿಕಿತ್ಸೆ ಗರ್ಭಿಣಿಯ ಹಕ್ಕು

Published:
Updated:

ಲಂಡನ್ (ಪಿಟಿಐ): ಭಾರತ ಮೂಲದ ದಂತ ವೈದ್ಯೆ ಸವಿತಾ ಹಾಲಪ್ಪನವರ ಸಾವಿನ ಪ್ರಕರಣದಲ್ಲಿ ತೀವ್ರ ಟೀಕೆಗೆ ಒಳಗಾಗಿರುವ ಐರ್ಲೆಂಡ್ ಸರ್ಕಾರ, ಈಗ ಗರ್ಭಪಾತ ನಿಷೇಧ ಕಾನೂನಿಗೆ ಸಂಬಂಧಿಸಿದಂತೆ ಕೆಲ ಸ್ಪಷ್ಟನೆಗಳನ್ನು ನೀಡಿದೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಗರ್ಭಪಾತ ಮಾಡುವಂತೆ ಸಲ್ಲಿಸಿದ ಕೋರಿಕೆಯನ್ನು ವೈದ್ಯರು ತಿರಸ್ಕರಿಸಿದರೆ ಮತ್ತೊಮ್ಮೆ ವೈದ್ಯಕೀಯ ಅಭಿಪ್ರಾಯ ಪಡೆಯುವ ಹಕ್ಕು ಗರ್ಭಿಣಿಗೆ ಇರುತ್ತದೆ ಎಂದು ಅದು ಐರೋಪ್ಯ ನ್ಯಾಯಮಂಡಳಿಗೆ ಬರೆದ ಪತ್ರದಲ್ಲಿ ತಿಳಿಸಿದೆ.

ಅಲ್ಲದೆ ತನಗೆ ಅಗತ್ಯ ಚಿಕಿತ್ಸೆಗಳನ್ನು ನೀಡುವಂತೆ ವೈದ್ಯರಿಗೆ ಆದೇಶಿಸಲು ಕೋರಿ ಹೈಕೋರ್ಟ್‌ಗೆ ಮನವಿ ಸಲ್ಲಿಸುವ ಹಕ್ಕು ಕೂಡ ಗರ್ಭಿಣಿಗೆ ಇದೆ ಎಂದು ಸರ್ಕಾರ ಹೇಳಿದೆ.

ಬೆಳಗಾವಿ ಮೂಲದ ವೈದ್ಯೆ ಸವಿತಾ ಹಾಲಪ್ಪನವರ ಅವರು ಗಾಲ್‌ವೆ ವಿವಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಗರ್ಭಿಣಿಯಾಗಿದ್ದ ಅವರು, ದೇಹಸ್ಥಿತಿ ಬಿಗಡಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಗರ್ಭಪಾತ ಮಾಡುವಂತೆ ಮನವಿ ಸಲ್ಲಿಸಿದ್ದರು.  ಭ್ರೂಣದ ಹೃದಯ ಬಡಿತ ಇದ್ದಿದ್ದರಿಂದ ಮತ್ತು ಇದು ಕ್ಯಾಥೋಲಿಕ್ ರಾಷ್ಟ್ರ ಎಂಬ ಕಾರಣ ನೀಡಿ ಗರ್ಭಪಾತ ನಿರಾಕರಿಸಲಾಗಿತ್ತು. ಇದು ವಿಶ್ವದಾದ್ಯಂತ ಭಾರಿ ವಿವಾದ ಹುಟ್ಟು ಹಾಕಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry