ಸೂಕ್ತ ಮಾರುಕಟ್ಟೆ ಭರವಸೆ

ಬುಧವಾರ, ಮೇ 22, 2019
32 °C

ಸೂಕ್ತ ಮಾರುಕಟ್ಟೆ ಭರವಸೆ

Published:
Updated:

ಬೆಂಗಳೂರು:  `ಅವೇಕ್ ಸಂಸ್ಥೆಯ ಕಚೇರಿ ಸ್ಥಾಪನೆಗೆ ಈಗಾಗಲೇ ಬಿಡದಿ ಸಮೀಪ ಐದು ಎಕರೆ ಜಾಗವನ್ನು ಮಂಜೂರು ಮಾಡಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ 25 ಲಕ್ಷ ರೂಪಾಯಿ ಧನಸಹಾಯ ನೀಡಲಾಗುವುದು~ ಎಂದು ಸಣ್ಣ ಕೈಗಾರಿಕೆ ಸಚಿವ ರಾಜೂಗೌಡ ತಿಳಿಸಿದರು.ಕರ್ನಾಟಕ ರಾಜ್ಯ ಮಹಿಳಾ ಉದ್ಯಮಿಗಳ ಸಂಸ್ಥೆ (ಅವೇಕ್) ನಗರದ ಯವನಿಕ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ `ಉದ್ಯಮಶೀಲತಾ ಶ್ರೇಷ್ಠ ಪ್ರಶಸ್ತಿ~ಯನ್ನು ಪ್ರದಾನ ಮಾಡಿ ಅವರು ಮಾತನಾಡಿದರು.`ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಯನ್ನು ಒದಗಿಸಬೇಕಿದೆ. ಮಹಿಳಾ ಉದ್ಯಮಿಗಳು ತಯಾರಿಸುವ ಉತ್ಪನ್ನಗಳನ್ನು ಕೊಂಡುಕೊಳ್ಳುವ ಬಗ್ಗೆ ನಿರ್ದಿಷ್ಟ ನಿಯಮ ರೂಪಿಸಲು ಸರ್ಕಾರ ಅವೇಕ್‌ನಂತಹ ಸಂಸ್ಥೆಗಳ ಸಹಕಾರ ಪಡೆಯಲಿದೆ~ ಎಂದು ಹೇಳಿದರು.`ಸ್ತ್ರೀಶಕ್ತಿ ಸಂಘಗಳು ಮಾತ್ರ ಬ್ಯಾಂಕುಗಳ ಸಾಲವನ್ನು ಸಮರ್ಪಕವಾಗಿ ಮರುಪಾವತಿ ಮಾಡುತ್ತಿವೆ. ಸ್ವಾವಲಂಬನೆ ಮತ್ತು ಆರ್ಥಿಕ ಸ್ವಾತಂತ್ರ್ಯ ನೀಡುವ ಮೂಲಕ ಮಹಿಳೆಯರಿಗೆ ಉತ್ತಮ ಜೀವನವನ್ನು ರೂಪಿಸುವಲ್ಲಿ ಪಾತ್ರವಹಿಸಿರುವ ಅವೇಕ್ ಸಂಸ್ಥೆಗೆ ಪ್ರಸಕ್ತ ವರ್ಷದಲ್ಲಿ ಹೆಚ್ಚಿನ ಮಹಿಳೆಯರು ಸೇರ್ಪಡೆಯಾಗಬೇಕು~ ಎಂದು ಸಲಹೆ ನೀಡಿದರು.ಇಂಧನ ಸಚಿವೆ ಶೋಭಾ ಕರಂದ್ಲಾಜೆ, `ಆರ್ಥಿಕ ಸ್ವಾತಂತ್ರ್ಯ ಪಡೆದ ಅನಕ್ಷರಸ್ಥ ಮಹಿಳೆಯರೂ ಸಹ ಕೌಟುಂಬಿಕ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಸಮರ್ಥರಾಗಿದ್ದಾರೆ. ಇದಕ್ಕೆ ಕರಾವಳಿ ಭಾಗದಲ್ಲಿ ಮೀನು ಮಾರಾಟ ಮಾಡುವ ಮಹಿಳೆಯರೇ  ಉತ್ತಮ ಉದಾಹರಣೆ. ಹಾಗಾಗಿ ಪದವಿ ಗಳಿಸುವುದಕ್ಕಿಂತ ಜೀವನ ಕೌಶಲಕ್ಕೆ ಹೆಚ್ಚಿನ ಆದ್ಯತೆ ನೀಡಿ~ ಎಂದು ಸಲಹೆ ಮಾಡಿದರು.`ಅವೇಕ್ ಸಂಸ್ಥೆಯ ಕಚೇರಿಯು ಕೇವಲ ಕಟ್ಟಡವಾಗಿ ಮಾತ್ರ ನಿರ್ಮಾಣಗೊಳ್ಳದೇ ಮಹಿಳಾ ಉದ್ಯಮಿಯನ್ನು ರೂಪಿಸುವ ಪ್ರಯೋಗಾಲಯವಾಗಬೇಕು. ಉದ್ಯಮ ನಡೆಸುವುದು ಸುಲಭದ ಮಾತಲ್ಲ, ಕುಹಕಿಗಳಿಂದ ಎದುರಾಗುವ ಅಡೆ-ತಡೆಗಳನ್ನು ಮೆಟ್ಟಿ ನಿಲ್ಲಲ್ಲು ಆತ್ಮವಿಶ್ವಾಸ ಬೆಳಸಿಕೊಳ್ಳಿ. ಅದಕ್ಕೆ ಪೂರಕವಾಗಿ ಬೇಕಿರುವ ಜ್ಞಾನವನ್ನು ಹೆಚ್ಚಿಸಿಕೊಳ್ಳಿ~ ಎಂದು ತಿಳಿಸಿದರು.ಮಹಿಳಾ ಉದ್ಯಮಿಗಳಾದ ವಿಜಾಪುರದ ಶೋಭಾಲಕ್ಷ್ಮಿ ಬಾಬು, ಬೆಂಗಳೂರಿನ ಪದ್ಮಜಾ ಸುಬ್ರಹ್ಮಣ್ಯ, ಬಿ.ಜಿ.ಲತಾ, ಕೊಡಗಿನ ಪೂರ್ಣಿಮಾ ವಿರೂಪಾಕ್ಷ, ಶಿವಮೊಗ್ಗದ ರಾಜಶ್ರೀ ಗುರುಪ್ರಸಾದ್, ಗುಲ್ಬರ್ಗದ ಸರಸ್ವತಿ, ತುಮಕೂರಿನ ಜಿ.ಎನ್.ಉಷಾರಾಣಿ  ಅವರಿಗೆ `ಉದ್ಯಮಶೀಲತಾ ಶ್ರೇಷ್ಠ ಪ್ರಶಸ್ತಿ~ಯನ್ನು ನೀಡಲಾಯಿತು.ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಅಧ್ಯಕ್ಷೆ ಸರೋಜಿನಿ ಭಾರದ್ವಾಜ್, ಸಂಸ್ಥೆಯ ಅಧ್ಯಕ್ಷೆ ಧನವಂತಿ ಜೈನ್, ಮಾಜಿ ಅಧ್ಯಕ್ಷೆ ರೇವತಿ ವೆಂಕಟರಾಮನ್, ಉಪಾಧ್ಯಕ್ಷೆ ಡಾ.ರಾಜೇಶ್ವರಿ ಇತರರು ಉಪಸ್ಥಿತರಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry