ಸೋಮವಾರ, ಜನವರಿ 27, 2020
21 °C

ಸೂಕ್ತ ಮಾಹಿತಿ ಒದಗಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರ ನೀಡುವ ಪಡಿತರ ಚೀಟಿಗಾಗಿ ಸಲ್ಲಿಸುವ ಅರ್ಜಿಗೆ ಸೂಕ್ತವಾದ ಮಾಹಿತಿ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಎ ಪಿ ಎಲ್ ಹಾಗೂ ಬಿ ಪಿ ಎಲ್ ಕಾರ್ಡ್‌ಗಳನ್ನು ಪಡೆಯಲು ಬೇಕಾದ ಅರ್ಹತೆಗಳ ಪಟ್ಟಿ ಮತ್ತು ಆದಾಯ ಮಿತಿಯ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಿದರೆ ಅರ್ಜಿ ಸಲ್ಲಿಸಲು ಅನುಕೂಲವಾಗುತ್ತದೆ.ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಿರುವುದರಿಂದ ರೈತರು, ಅನಕ್ಷರಸ್ಥರಿಗೆ ಮಾಹಿತಿಗಳು ಲಭ್ಯವಾಗದೆ ತೊಂದರೆಯಾಗಿದೆ. ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಅಗತ್ಯ ಮಾಹಿತಿ ಸಿಗುವಂತೆ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಪ್ರತಿಕ್ರಿಯಿಸಿ (+)