ಸೂಕ್ತ ಸಮಯದಲ್ಲಿ ನಿರ್ಧಾರ: ಮುಲಾಯಂ

7

ಸೂಕ್ತ ಸಮಯದಲ್ಲಿ ನಿರ್ಧಾರ: ಮುಲಾಯಂ

Published:
Updated:

ನವದೆಹಲಿ (ಐಎಎನ್‌ಎಸ್): ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯುಪಿಎ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆಯುವ ಕುರಿತು ಸುಳಿವು ನೀಡಿದ್ದಾರೆ.ಯುಪಿಎ ಸರ್ಕಾರದಲ್ಲಿ ಮುಂದುವರಿಯುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, `ಸರ್ಕಾರದಲ್ಲಿ ಮುಂದುವರಿಯುವ ಕುರಿತು ಪಕ್ಷ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅವರು ಜಾರಿಕೆ ಉತ್ತರ ನೀಡಿದ್ದಾರೆ.`ಸರ್ಕಾರ ಸಿಬಿಐ ತನಿಖೆ ಮೂಲಕ ತಮ್ಮನ್ನು ಹಗರಣಗಳಲ್ಲಿ ಸಿಕ್ಕಿಸಲು ಪ್ರಯತ್ನಿಸುತ್ತಿದೆ' ಎಂದು ಆರೋಪಿಸಿದ ಮುಲಾಯಂ ಸಿಂಗ್ `ನಾನು ಸಿಬಿಐ ತನಿಖೆಗೆಲ್ಲ ಹೆದರುವವನಲ್ಲ' ಎಂದು ಹೇಳಿದ್ದಾರೆ.ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ: ಸರ್ಕಾರಿ ನೌಕರಿಯಲ್ಲಿರುವ ಎಸ್.ಸಿ/ಎಸ್.ಟಿ ಸಿಬ್ಬಂದಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ಮಸೂದೆಗೆ ಒಪ್ಪಿಗೆ ನೀಡುವ ಸಂದರ್ಭದಲ್ಲಿ ಮುಸ್ಲಿಂ ಸಮುದಾಯಕ್ಕೂ ಮೀಸಲಾತಿ ಕಲ್ಪಿಸಬೇಕೆಂದು ಸೋಮವಾರ ಸಮಾಜವಾದಿ ಪಾರ್ಟಿ ಒತ್ತಾಯಿಸಿತ್ತು.ಈ ಹಿನ್ನೆಲೆಯಲ್ಲಿ , `ಎಸ್‌ಸಿ/ಎಸ್ಟಿ ಸರ್ಕಾರಿ ಉದ್ಯೋಗಿಗಳಿಗೆ ನೌಕರಿಯ ಬಡ್ತಿಯಲ್ಲಿ ಮೀಸಲಾತಿ ನೀಡಲು ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತರುವುದಾದರೆ,  ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಲು ಸಂವಿಧಾನಕ್ಕೆ ಏಕೆ ತಿದ್ದುಪಡಿ ತರಬಾರದು ಎಂದು ಮುಲಾಯಂ ಸಿಂಗ್ ಪ್ರಶಿಸಿದ್ದಾರೆ.

ಮುಲಾಯಂ ಒತ್ತಾಯವನ್ನು ಎಲ್‌ಜೆಪಿ ಮುಖ್ಯಸ್ಥ ರಾಮ್‌ವಿಲಾಸ್ ಪಾಸ್ವಾನ್‌ಪಾಸ್ವಾನ್ ಮತ್ತು ರಾಷ್ಟ್ರೀಯ ಜನತಾದಳದ ಸಂಸತ್ ಸದಸ್ಯರು ಬೆಂಬಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry