ಸೂಚ್ಯಂಕ:ತೀವ್ರ ಏರಿಳಿತ ನಿರೀಕ್ಷೆ?

ನವದೆಹಲಿ (ಪಿಟಿಐ): ಅಕ್ಷಯ ತೃತೀಯಾ, ಕಾರ್ಪೊರೇಟ್ ಫಲಿತಾಂಶ, ರೂಪಾಯಿ ಮೌಲ್ಯ ಕುಸಿತ ಇತ್ಯಾದಿ ಸಂಗತಿಗಳ ಹಿನ್ನೆಲೆಯಲ್ಲಿ ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕ ಈ ವಾರ ತೀವ್ರ ಏರಿಳಿತ ಕಾಣುವ ನಿರೀಕ್ಷೆ ಇದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ರಿಲಯನ್ಸ್ ಇನ್ಫ್ರಾ (ಆರ್ಐಎಲ್) ಈಗಾಗಲೇ 2011-12ನೇ ಸಾಲಿನ ನಾಲ್ಕನೇಯ ತ್ರೈಮಾಸಿಕ ಅವಧಿಯ ಹಣಕಾಸು ಫಲಿತಾಂಶ ಪ್ರಕಟಿಸಿದ್ದು, ಶೇ. 21ರಷ್ಟು ಕುಸಿತ ಕಂಡಿದೆ. ಆದರೆ, ವಹಿವಾಟಿನ ಅವಧಿ ಮುಗಿದ ನಂತರ `ಆರ್ಐಎಲ್~ ಫಲಿತಾಂಶ ಪ್ರಕಟಿಸಿದ್ದರಿಂದ ಇದು ಮಾರುಕಟ್ಟೆಯ ಮೇಲೆ ಅಷ್ಟೊಂದು ಪರಿಣಾಮ ಬೀರಲಿಲ್ಲ ಎಂದು ಆಶಿಕ್ ಷೇರು ಬ್ರೋಕಿಂಗ್ ಸಂಸ್ಥೆಯ ಮುಖ್ಯಸ್ಥ ಪರಾಸ್ ಭೋತ್ರಾ ಅಭಿಪ್ರಾಯಪಟ್ಟಿದ್ದಾರೆ.
`ಟಿಸಿಎಸ್~ ವಿಪ್ರೊ, ಮಾರುತಿ ಸುಜುಕಿ ಮತ್ತು ಐಸಿಐಸಿಐ ಬ್ಯಾಂಕ್ ಈ ವಾರ 2011-12ನೇ ಹಣಕಾಸು ವರ್ಷದ ನಾಲ್ಕನೇಯ ತ್ರೈಮಾಸಿಕ ಅವಧಿಯ ಹಣಕಾಸು ಸಾಧನೆ ಪ್ರಕಟಿಸಲಿವೆ. ಈ ಸಂಗತಿ ಕೂಡ ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ ಎಂದು `ಸಿಎನ್ಐ~ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಕಿಶೋರ್ ಓಸ್ವಾಲ್ ಹೇಳಿದ್ದಾರೆ.
ಡಾಲರ್ ಎದುರು ರೂಪಾಯಿ ಮೌಲ್ಯ ಮೂರು ತಿಂಗಳ ಹಿಂದಿನ ಮಟ್ಟಕ್ಕೆ ಕುಸಿದಿರುವುದು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರುತ್ತಿರುವುದು ಕೂಡ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಬೊನಂಜ ಪೋರ್ಟ್ಪೊಲಿಯೊ ಸಂಸ್ಥೆಯ ಮುಖ್ಯಸ್ಥ ಶರಣು ಗೋಯಲ್ ಅಭಿಪ್ರಾಯಪಟ್ಟಿದ್ದಾರೆ. ಕಳೆದ ಮಂಗಳವಾರ ಅನಿರೀಕ್ಷಿತವಾಗಿ `ಆರ್ಬಿಐ~ ಅಲ್ಪಾವಧಿ ಬಡ್ಡಿ ದರ ತಗ್ಗಿಸಿದ್ದರಿಂದ ಸೂಚ್ಯಂಕ ದಿಢೀರನೆ ಶೇ. 1.63ರಷ್ಟು ಏರಿಕೆ ಪಡೆಯಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.