ಸೂಚ್ಯಂಕ ಏರಿಕೆ

7

ಸೂಚ್ಯಂಕ ಏರಿಕೆ

Published:
Updated:

ಮುಂಬೈ (ಪಿಟಿಐ):  ಜಾಗತಿಕ ಆರ್ಥಿಕ ಅಸ್ಥಿರತೆಯಿಂದ ಸಾಲದ ಸುಳಿಗೆ ಸಿಲುಕಿರುವ ಯೂರೋಪಿಯನ್ ಬ್ಯಾಂಕುಗಳಿಗೆ ಜರ್ಮನಿ ಮತ್ತು ಫ್ರಾನ್ಸ್ ಹಣಕಾಸು ನೆರವು ನೀಡುವ ಒಪ್ಪಂದಕ್ಕೆ ಬಂದ ಹಿನ್ನೆಲೆಯಲ್ಲಿ, ಸೋಮವಾರ ಜಾಗತಿಕ ಷೇರುಪೇಟೆಗಳಲ್ಲಿ  ಚೇತರಿಕೆ ಕಂಡುಬಂದಿತು.

ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಸೋಮವಾರ 325 ಅಂಶಗಳಷ್ಟು ಏರಿಕೆ ಕಂಡಿದ್ದು, 16,557 ಅಂಶಗಳಿಗೆ ವಹಿವಾಟು ಕೊನೆಗೊಳಿಸಿದೆ. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕೂಡ ಸೋಮವಾರ 91ಅಂಶಗಳಷ್ಟು ಚೇತರಿಕೆ ಕಂಡಿದ್ದು, 4,979 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.

ಭಾನುವಾರ ರಾತ್ರಿ ಜರ್ಮನಿಯ ಚಾನ್ಸ್‌ಲರ್ ಏಂಜೆಲಾ ಮರ್ಕೆಲ್ ಮತ್ತು ಫ್ರಾನ್ಸ್‌ನ ಅಧ್ಯಕ್ಷ ನಿಕೊಲಸ್ ಸರ್ಕೋಜಿ ಅವರು ಜಂಟಿಯಾಗಿ ಯೂರೋಪ್ ಸಾಲದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ `ಸಮಗ್ರ  ಪ್ಯಾಕೇಜ್~  ಒಂದನ್ನು ಪ್ರಕಟಿಸಿದರು. ಹಣಕಾಸು ಮಗ್ಗಟ್ಟು ಎದುರಿಸುತ್ತಿರುವ ಯೂರೋಪಿಯನ್ ಬ್ಯಾಂಕುಗಳಿಗೆ ಈ ತಿಂಗಳ ಅಂತ್ಯದೊಳಗೆ ಹಣಕಾಸಿನ ನೆರವು ನೀಡುವುದೂ ಈ ಪ್ಯಾಕೇಜ್‌ನಲ್ಲಿದೆ. ಈ ಒಪ್ಪಂದ  ಪ್ರಕಟಗೊಳ್ಳುತ್ತಿದ್ದಂತೆ ಹೂಡಿಕೆದಾರರಲ್ಲಿ ಆತ್ಮವಿಶ್ವಾಸ ಮರಳಿದೆ. ಇದರಿಂದ ಸೋಮವಾರ ವಹಿವಾಟಿನಲ್ಲಿ ಚೇತರಿಕೆ ಕಂಡುಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry