ಸೂಚ್ಯಂಕ ಏರಿಕೆ

7

ಸೂಚ್ಯಂಕ ಏರಿಕೆ

Published:
Updated:

ಮುಂಬೈ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು  ಶುಕ್ರವಾರದ ವಹಿವಾಟಿನಲ್ಲಿ 173 ಅಂಶಗಳಷ್ಟು ಏರಿಕೆ ಕಂಡಿದ್ದು, ಕಳೆದ 14 ವಾರಗಳಲ್ಲೇ  ಗರಿಷ್ಠ ಮಟ್ಟ 17,605 ಅಂಶಗಳಿಗೆ ಏರಿದೆ. ಜಾಗತಿಕ ಷೇರುಪೇಟೆಗಳು ಚೇತರಿಸಿಕೊಂಡಿದ್ದು, ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಚಟುವಟಿಕೆ ಹೆಚ್ಚಿರುವುದು ಸೂಚ್ಯಂಕ ಏರುವಂತೆ ಮಾಡಿದೆ.  ರಿಯಾಲ್ಟಿ, ಬ್ಯಾಂಕಿಂಗ್, ತೈಲ ಮತ್ತು ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ (ಎಫ್‌ಎಂಸಿಜಿ) ವಲಯದ ಷೇರುಗಳು ವಾರಾಂತ್ಯದ ವಹಿವಾಟಿನಲ್ಲಿ ಲಾಭ ಮಾಡಿಕೊಂಡವು.`ಎಫ್‌ಐಐ~ ಹೂಡಿಕೆದಾರರು  ಬುಧವಾರದ ವಹಿವಾಟಿನಲ್ಲಿ  ್ಙ2,092 ಕೋಟಿ ಮೊತ್ತದ ಹೂಡಿಕೆ ಮಾಡಿದ್ದು, ಗುರುವಾರದ ವಹಿವಾಟಿನಲ್ಲಿ ರೂ 2,134 ಕೋಟಿ ಮೊತ್ತದ ಷೇರು ಖರೀದಿಸಿದ್ದಾರೆ ಎಂದು ಮಾರುಕಟ್ಟೆ ನಿಯಂತ್ರಕ `ಸೆಬಿ~ ಹೇಳಿದೆ. ಡಾಲರ್ ಎದುರು  ರೂಪಾಯಿ ಮೌಲ್ಯ ಏರುತ್ತಿರುವುದು ಕೂಡ ಪೇಟೆಗೆ ಬಲ ತುಂಬಿದೆ.ಕಳೆದ ನಾಲ್ಕು ವಹಿವಾಟು ಅವಧಿಗಳಲ್ಲಿ ಸೂಚ್ಯಂಕ ಒಟ್ಟಾರೆ 741 ಅಂಶಗಳಷ್ಟು ಏರಿಕೆ ಕಂಡಿದೆ. ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ ಶುಕ್ರವಾರದ ವಹಿವಾಟಿನಲ್ಲಿ 56 ಅಂಶಗಳಷ್ಟು ಚೇತರಿಕೆ ಕಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry