ಸೂಚ್ಯಂಕ ಕುಸಿತ: ಜಿಡಿಪಿ ಮೇಲೆ ಪರಿಣಾಮ ಇಲ್ಲ

7

ಸೂಚ್ಯಂಕ ಕುಸಿತ: ಜಿಡಿಪಿ ಮೇಲೆ ಪರಿಣಾಮ ಇಲ್ಲ

Published:
Updated:

ನವದೆಹಲಿ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಕುಸಿದಿರುವುದಕ್ಕೆ ಹೂಡಿಕೆದಾರರು ಆತಂಕ ಪಡುವುದು ಬೇಡ. ದೇಶದ ಆರ್ಥಿಕ ಅಡಿಪಾಯ ಭದ್ರವಾಗಿದೆ. ಈ ಹಣಕಾಸು ವರ್ಷದ ಅಂತ್ಯಕ್ಕೆ ಆರ್ಥಿಕ ವೃದ್ಧಿ ದರ (ಜಿಡಿಪಿ) ಉದ್ದೇಶಿತ ಗುರಿ 8.5ರಷ್ಟು ತಲುಪಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಷೇರುಪೇಟೆಯಲ್ಲಿ ಮಾರಾಟದ ಒತ್ತಡ ಹೆಚ್ಚಿದ ಕಾರಣ ಸೂಚ್ಯಂಕ ಕುಸಿದಿದೆ. ಇದರಿಂದ ಸಣ್ಣ ಮತ್ತು ಮಧ್ಯಮ ಹೂಡಿಕೆದಾರರು ಆತಂಕಪಡುವುದು ಬೇಡ. ವಿದೇಶಿ ವಿತ್ತೀಯ ಚಟುವಟಿಕೆಗಳು ಶೀಘ್ರದಲ್ಲೇ ಸ್ಥಿರಗೊಳ್ಳಲಿದೆ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry