ಸೂಚ್ಯಂಕ: ಚೇತರಿಕೆ

7

ಸೂಚ್ಯಂಕ: ಚೇತರಿಕೆ

Published:
Updated:

ಮುಂಬೈ (ಐಎಎನ್‌ಎಸ್): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ವಾರದ ವಹಿವಾಟಿನಲ್ಲಿ  147 ಅಂಶಗಳಷ್ಟು ಏರಿಕೆ ಕಾಣುವಲ್ಲಿ ಯಶಸ್ವಿಯಾಗಿದ್ದು, ಹಿಂದಿನ ಎರಡು ವಾರಗಳ ಕುಸಿತದಿಂದ ಸ್ವಲ್ಪ ಚೇತರಿಕೆ ಕಂಡಿದೆ. ವಾರಾಂತ್ಯದಲ್ಲಿ ಬ್ಯಾಂಕುಗಳು ಸೇರಿದಂತೆ ಕೆಲವು ಕಂಪೆನಿಗಳು ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ಪೇಟೆಯಲ್ಲಿ ಖರೀದಿ ಮತ್ತೆ  ಚುರುಕು ಪಡೆದುಕೊಳ್ಳುತ್ತಿದೆ. 19.007 ಅಂಶಗಳಿಗೆ ಈ ವಾರದ ವಹಿವಾಟು ಕೊನೆಗೊಂಡಿತು. ಕಳೆದ ವಾರದ 18,860 ಅಂಶಗಳಿಗೆ  ಹೋಲಿಸಿದರೆ ಇದು ಶೇಕಡ 0.78ರಷ್ಟು ಪ್ರಗತಿ ಕಂಡಿದ್ದು, 147 ಅಂಶಗಳ ಏರಿಕೆ ದಾಖಲಿಸಿದೆ.ಹಣದುಬ್ಬರ ಏರಿಕೆಯನ್ನು ನಿಯಂತ್ರಣಕ್ಕೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ ಜನವರಿ 25 ರಂದು ಮೂರನೆ ತ್ರೈಮಾಸಿಕ ಹಣಕಾಸು ಪರಾಮರ್ಶೆಯನ್ನು ಪ್ರಕಟಿಸಲಿದ್ದು, ಇದು ಕೂಡ  ಹೂಡಿಕೆದಾರರ ಉತ್ಸಾಹ ಕುಂದುವಂತೆ ಮಾಡಿದೆ. ರಾಷ್ಟ್ರಿಯ ಷೇರು ಸೂಚ್ಯಂಕ (ನಿಫ್ಟಿ) ಕೂಡ 15 ಅಂಶಗಳ ಕುಸಿತದೊಂದಿಗೆ ವಾರದ ವಹಿವಾಟು ಪೂರ್ಣಗೊಳಿಸಿತು. ಕಳೆದ ವಾರಕ್ಕೆ ಹೋಲಿಸಿದರೆ ಇದು ಶೇ 0.26ರಷ್ಟು ಕುಸಿತ ದಾಖಲಿಸಿದೆ. ವಾರದ ವಹಿವಾಟಿನಲ್ಲಿ ವಿಪ್ರೊ ಇಳಿಕೆ ಕಂಡರೆ, ರಿಲಯನ್ಸ್ ಇನ್‌ಫ್ರಾ ಮತ್ತು ಕಮ್ಯುನಿಕೇಷನ್  ಶೇ 2.14 (ರೂ.136), ಬಿಎಚ್‌ಇಎಲ್ ಶೇ 1.75 (ರೂ.2,217)ರಷ್ಟು ಪ್ರಗತಿ ದಾಖಲಿಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry