ಶುಕ್ರವಾರ, ಆಗಸ್ಟ್ 7, 2020
23 °C

ಸೂಚ್ಯಂಕ ಚೇತರಿಕೆ: ಖರೀದಿ ಭರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೂಚ್ಯಂಕ ಚೇತರಿಕೆ: ಖರೀದಿ ಭರಾಟೆ

ಮುಂಬೈ (ಪಿಟಿಐ):  ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಲಾಭದ ಹಾದಿಗೆ ಮರಳಿದ್ದು, ಗುರುವಾರದ ವಹಿವಾಟಿನಲ್ಲಿ ಮತ್ತೆ 94 ಅಂಶಗಳಷ್ಟು ಚೇತರಿಕೆ ಕಂಡಿದ್ದು, 17, 278 ಅಂಶಗಳನ್ನು ತಲುಪಿದೆ.ಇನ್ಫೋಸಿಸ್ ಐಸಿಐಸಿಐ ಬ್ಯಾಂಕ್, ಆರ್‌ಐಎಲ್ ಷೇರು ದರಗಳು ಸತತ ಮೂರು ದಿನಗಳಿಂದ ಏರಿಕೆ ಕಾಣುತ್ತಿವೆ.  ಜಾಗತಿಕ ಮಾರುಕಟ್ಟೆ ಚೇತರಿಸಿಕೊಂಡಿರುವುದು ಯೂರೋಪ್ ಸಾಲದ ಬಿಕ್ಕಟ್ಟಿಗೆ ಸಂಬಂಧಿಸಿದ ಧನಾತ್ಮಕ ಬೆಳವಣಿಗೆಗಳು ಮತ್ತು ರಾಷ್ಟ್ರಪತಿ ಚುನಾವಣೆ ಮುಗಿದ ಬಳಿಕ ಆರ್ಥಿಕ ಸುಧಾರಣೆ ಪರ್ವ ಪ್ರಾರಂಭಗೊಳ್ಳಲಿದೆ ಎಂಬ ವಿಶ್ಲೇಷಣೆ ವಹಿವಾಟಿಗೆ ಬಲ ತುಂಬಿವೆ.ಕಳೆದ ಎರಡು ವಹಿವಾಟು ಅವಧಿಗಳಲ್ಲಿ (ಮಂಗಳವಾರ, ಬುಧವಾರ) ಸೂಚ್ಯಂಕ 81 ಅಂಶಗಳಷ್ಟು ಏರಿಕೆ ಕಂಡಿದೆ. ಮಾರುತಿ ಸುಜುಕಿಯ ಮಾನೇಸರ ತಯಾರಿಕೆ ಘಟಕವನ್ನು ಗಲಭೆ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಿರುವುದರಿಂದ ಸುಜುಕಿ ಷೇರು ದರಗಳು ಶೇ 9ರಷ್ಟು ಹಾನಿ ಕಂಡಿವೆ. ಉನ್ನತಾಧಿಕಾರ ಸಚಿವರ ಸಮಿತಿ ಶುಕ್ರವಾರ ಸಭೆ ಸೇರಲಿದ್ದು, ಎರಡನೆಯ ತಲೆಮಾರಿನ ತರಂಗಾಂತರ ಗುಚ್ಛ (2ಜಿ) ಹಂಚಿಕೆಗೆ ಸಂಬಂಧಿಸಿದಂತೆ ಮೀಸಲು ದರ ನಿಗದಿಪಡಿಸಲಿದೆ. ಈ ಹಿನ್ನೆಲೆಯಲ್ಲಿ ಏರ್‌ಟೆಲ್ ಷೇರು ದರಗಳು ಗುರುವಾರ ಶೇ 2.3ರಷ್ಟು ಕುಸಿತ ಕಂಡವು.ರಾಷ್ಟ್ರಪತಿ ಚುನಾವಣೆ ಫಲಿತಾಂಶ ಜುಲೈ 22ರಂದು ಪ್ರಕಟಗೊಳ್ಳಲಿದೆ. ಇದರ ನಂತರ ಸರ್ಕಾರ ಆರ್ಥಿಕ ಸುಧಾರಣೆಗೆ ಮುಂದಾಗಲಿದೆ ಎನ್ನುವ ಭಾರೀ ವಿಶ್ಲೇಷಣೆಗಳು ಷೇರುಪೇಟೆಯಲ್ಲಿ ನಡೆಯುತ್ತಿವೆ. ಇದರ ಜತೆಗೆ, ಡಾಲರ್ ಎದುರು ರೂಪಾಯಿ ಮೌಲ್ಯ ಸ್ಥಿರಗೊಂಡಿರುವುದರಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಖರೀದಿ ಭರಾಟೆಯೂ ಹೆಚ್ಚಿದೆ.ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ ಗುರುವಾರದ ವಹಿವಾಟಿನಲ್ಲಿ 26 ಅಂಶಗಳಷ್ಟು ಏರಿಕೆ ಪಡೆಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.