ಸೋಮವಾರ, ಅಕ್ಟೋಬರ್ 14, 2019
29 °C

ಸೂಚ್ಯಂಕ ಚೇತರಿಕೆ

Published:
Updated:

ಮುಂಬೈ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಹೊಸ ವರ್ಷದ ಮೊದಲ ದಿನದ  ವಹಿವಾಟಿನಲ್ಲಿ 63 ಅಂಶಗಳಷ್ಟು ಏರಿಕೆ ದಾಖಲಿಸಿತು.ಹಿಂದಿನ ನಾಲ್ಕು ಸತತ ವಹಿವಾಟು ದಿನಗಳಲ್ಲಿ ಕುಸಿತ ಕಂಡಿದ್ದ ಸೂಚ್ಯಂಕವು ಸೋಮವಾರ ಚೇತರಿಕೆ ಕಂಡು 15,517.92 ಅಂಶಗಳೊಂದಿಗೆ ದಿನದ ವಹಿವಾಟು ಕೊನೆಗೊಳಿಸಿದೆ.ಅರ್ಹ ವಿದೇಶಿ ಹೂಡಿಕೆದಾರರು (ಕ್ಯುಎಫ್‌ಐ) ಷೇರುಪೇಟೆಯಲ್ಲಿ  ನೇರವಾಗಿ ಬಂಡವಾಳ ತೊಡಗಿಸಲು ಅನುಮತಿ ನೀಡಿರುವ ಸಕಾರಾತ್ಮಕ ನಿರ್ಧಾರವೂ ವಹಿವಾಟಿನ ಮೇಲೆ ಗಮನಾರ್ಹ ಪರಿಣಾಮ ಬೀರಿಲ್ಲ.

Post Comments (+)