ಸೂಚ್ಯಂಕ ತೀವ್ರ ಕುಸಿತ

7

ಸೂಚ್ಯಂಕ ತೀವ್ರ ಕುಸಿತ

Published:
Updated:
ಸೂಚ್ಯಂಕ ತೀವ್ರ ಕುಸಿತ

ಮುಂಬೈ (ಪಿಟಿಐ): ಹೂಡಿಕೆದಾರರು ಗಮನಾರ್ಹ ಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡಿದ್ದರಿಂದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಬುಧವಾರದ ವಹಿವಾಟಿನಲ್ಲಿ 365 ಅಂಶಗಳಿಗೆ ಎರವಾಗಿ 15,699.97 ಅಂಶಗಳಿಗೆ ಕುಸಿತ ಕಂಡಿತು.ಜಾಗತಿಕ ಅರ್ಥ ವ್ಯವಸ್ಥೆಯಲ್ಲಿನ ನಿಧಾನ ಪ್ರಗತಿಗೆ ಸಂಬಂಧಿಸಿದ ಕಳವಳ ಮತ್ತು ತಿಂಗಳ ಷೇರು ಗುತ್ತಿಗೆ ಇತ್ಯರ್ಥಗೊಳ್ಳುವ ದಿನ ಹತ್ತಿರ ಬಂದಿರುವ ಹಿನ್ನೆಲೆಯಲ್ಲಿ ವಹಿವಾಟುದಾರರು ಷೇರುಗಳ ಮಾರಾಟಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ಹೀಗಾಗಿ 13 ವಲಯವಾರು ಸೂಚ್ಯಂಕಗಳಲ್ಲಿ 12 ಸೂಚ್ಯಂಕಗಳಲ್ಲಿ ನಷ್ಟ ಕಾಣಿಸಿಕೊಂಡಿತು.30 ಷೇರುಗಳ ಸೂಚ್ಯಂಕದಲ್ಲಿ ಎನ್‌ಟಿಪಿಸಿ ಹೊರತುಪಡಿಸಿ ಉಳಿದ 29 ಷೇರುಗಳ ಬೆಲೆಗಳು ಕುಸಿತ ದಾಖಲಿಸಿದವು.ಭಾರಿ ಯಂತ್ರೋಪಕರಣ, ಐಟಿ, ತೈಲ ಶುದ್ಧೀಕರಣ, ಬ್ಯಾಂಕ್, ವಿದ್ಯುತ್ ಮತ್ತು ಲೋಹದ ಷೇರುಗಳು ತೀವ್ರ ನಷ್ಟ ಕಂಡವು.ಸೂಚ್ಯಂಕವು ದಿನದ ಆರಂಭದಲ್ಲಿಯೇ   ದುರ್ಬಲ ವಹಿವಾಟು ದಾಖಲಿಸಿತು. ವಹಿವಾಟಿನ ಒಂದು ಹಂತದಲ್ಲಿ 587 ಅಂಶಗಳವರೆಗೆ ಕುಸಿತ ದಾಖಲಿಸಿತು. ಆನಂತರ ಕೆಲ ಮಟ್ಟಿಗೆ ಚೇತರಿಸಿಕೊಂಡು  ದಿನದ ವಹಿವಾಟನ್ನು 15,699.97 ಅಂಶಗಳೊಂದಿಗೆ ಕೊನೆಗೊಳಿಸಿತು.2009ರ ನವೆಂಬರ್ 3ರ ನಂತರದ ಅತಿ ಕಡಿಮೆ ಮಟ್ಟ ಇದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry