ಸೂಚ್ಯಂಕ ಶೀಘ್ರದಲ್ಲೇ 20 ಸಾವಿರಕ್ಕೆ?

7

ಸೂಚ್ಯಂಕ ಶೀಘ್ರದಲ್ಲೇ 20 ಸಾವಿರಕ್ಕೆ?

Published:
Updated:

ನವದೆಹಲಿ (ಪಿಟಿಐ): ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕ ಶೀಘ್ರದಲ್ಲೇ 20 ಸಾವಿರ ಅಂಶಗಳನ್ನು ತಲುಪಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಹೇಳಿದೆ.ಕೇಂದ್ರ ಸರ್ಕಾರ ಕೈಗೊಂಡಿರುವ ಆರ್ಥಿಕ ಸುಧಾರಣಾ ಕ್ರಮಗಳು, ಯೂರೋಪ್ ಬಿಕ್ಕಟ್ಟು ಇತ್ಯರ್ಥಕ್ಕೆ ಸಂಬಂಧಿಸಿದ ಧನಾತ್ಮಕ ಬೆಳವಣಿಗೆಗಳಿಂದ ಸೂಚ್ಯಂಕ ದಾಖಲೆ ಪ್ರಮಾಣದಲ್ಲಿ ಜಿಗಿಯುತ್ತಿದೆ. ಕಳೆದ ತಿಂಗಳು `ಎಫ್‌ಐಐ~ ಹೂಡಿಕೆದಾರರು ರೂ19 ಸಾವಿರ ಕೋಟಿ ಹೂಡಿಕೆ ಮಾಡಿದ್ದಾರೆ. ಇದು ಕಳೆದ 7 ತಿಂಗಳಲ್ಲೇ ಗರಿಷ್ಠ ಪ್ರಮಾಣದ ಹೂಡಿಕೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಸೂಚ್ಯಂಕ ಶೀಘ್ರದಲ್ಲೇ 20 ಸಾವಿರ ಗಡಿ ತಲುಪಲಿದೆ ಎಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry