ಸೂಚ್ಯಂಕ 15 ತಿಂಗಳಲ್ಲಿಯೇ ಗರಿಷ್ಠ

7

ಸೂಚ್ಯಂಕ 15 ತಿಂಗಳಲ್ಲಿಯೇ ಗರಿಷ್ಠ

Published:
Updated:
ಸೂಚ್ಯಂಕ 15 ತಿಂಗಳಲ್ಲಿಯೇ ಗರಿಷ್ಠ

ಮುಂಬೈ(ಪಿಟಿಐ): ಮುಂಬೈ ಷೇರುಪೇಟೆಯಲ್ಲಿ 15 ತಿಂಗಳ ನಂತರ ಮತ್ತೆ ತೇಜಿ ಉಂಟಾಗಿದ್ದು, ಸಂವೇದಿ ಸೂಚ್ಯಂಕ ವು ಗುರುವಾರ 19000 ಅಂಶಗಳ ಗಡಿಯನ್ನು ಮತ್ತೊಮ್ಮೆ ದಾಟಿತು.ಕೇಂದ್ರ ಸರ್ಕಾರ `ವಿದೇಶಿ ನೇರ ಹೂಡಿಕೆ~ಗೆ ಹೆಚ್ಚಿನ ಅವಕಾಶ ನೀಡುವ ಮೂಲಕ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದರ ಪರಿಣಾಮವಾಗಿ ಷೇರುಪೇಟೆಯಲ್ಲಿ ಭಾರಿ ಆಶಾದಾಯಕ ಬೆಳವಣಿಗೆ ಕಂಡುಬಂದಿದೆ. ಅದರಿಂದಾಗಿಯೇ ಸೂಚ್ಯಂಕದಲ್ಲಿ ಭಾರಿ ಏರಿಕೆ ಕಂಡುಬಂದಿತು ಎಂದು ಮಾರುಕಟ್ಟೆ ಪಂಡಿತರು ವಿಶ್ಲೇಷಿಸಿದ್ದಾರೆ.2011ರ ಜುಲೈನಲ್ಲಿ 19,107.04 ಅಂಶ ದಾಖಲಿಸಿದ್ದ `ಬಿಎಸ್‌ಇ~, ಈಗ ಮತ್ತೆ ಅದೇ ಮಟ್ಟದ ಬೆಳವಣಿಗೆ ತೋರಿದೆ. ಒಂದೇ ದಿನದಲ್ಲಿ 188.46 ಅಂಶ ಏರಿಕೆ ದಾಖಲಿಸಿದ ಸಂವೇದಿ ಸೂಚ್ಯಂಕವು 19,058.15ರಲ್ಲಿ ದಿನದಂತ್ಯ ಕಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry