ಶುಕ್ರವಾರ, ಡಿಸೆಂಬರ್ 13, 2019
16 °C

ಸೂಚ್ಯಂಕ 157 ಅಂಶ ಚೇತರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೂಚ್ಯಂಕ 157 ಅಂಶ ಚೇತರಿಕೆ

ಮುಂಬೈ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಶುಕ್ರವಾರದ ವಹಿವಾಟಿನಲ್ಲಿ 157 ಅಂಶಗಳಷ್ಟು ಏರಿಕೆ ಕಂಡಿದ್ದು, ಕಳೆದ 11 ವಾರಗಳಲ್ಲೇ ಗರಿಷ್ಠ ಮಟ್ಟವಾದ 17,234 ಅಂಶಗಳಿಗೆ ತಲುಪಿದೆ.ಜನವರಿ 14ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಆಹಾರ ಹಣದುಬ್ಬರ ದರ ಮತ್ತಷ್ಟು ಇಳಿಕೆ ಕಂಡಿರುವುದು ಸೂಚ್ಯಂಕ ಜಿಗಿಯುವಂತೆ ಮಾಡಿದೆ.  ಭಾರತೀಯ ರಿಸರ್ವ್ ಬ್ಯಾಂಕ್ ನಗದು ಮೀಸಲು ಅನುಪಾತ (ಸಿಆರ್‌ಆರ್) ತಗ್ಗಿಸಿರುವುದು ಮತ್ತು ಜಾಗತಿಕ ಷೇರುಪೇಟೆಗಳು ಚೇತರಿಸಿಕೊಂಡಿರುವ ಸುದ್ದಿಗಳು ವಿದೇಶಿ ವಿತ್ತೀಯ ಹೂಡಿಕೆದಾರರ (ಎಫ್‌ಐಐ) ಚಟುವಟಿಕೆಗೆ ಉತ್ತೇಜನ ನೀಡಿದ್ದು, ಮತ್ತೊಮ್ಮೆ ಭರ್ಜರಿ  ವಹಿವಾಟು ದಾಖಲಾಗಿದೆ.

 

ತೈಲಶುದ್ಧೀಕರಣ, ಮಾಹಿತಿ ತಂತ್ರಜ್ಞಾನ, ಲೋಹ ಮತ್ತು ವಾಹನ ತಯಾರಿಕೆ ಕಂಪೆನಿಗಳ ಷೇರುಗಳು ಶುಕ್ರವಾರದ ವಹಿವಾಟಿನಲ್ಲಿ ಲಾಭ ಮಾಡಿಕೊಂಡವು. ಇನ್ಫೋಸಿಸ್, ಆರ್‌ಐಎಲ್, ಬಿಎಚ್‌ಐಎಲ್, ಏರ್‌ಟೆಲ್, ಟಿಸಿಎಸ್ ಷೇರುಗಳು ಗರಿಷ್ಠ ಏರಿಕೆ ಪಡೆದವು.ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ ಶುಕ್ರವಾರದ ವಹಿವಾಟಿನಲ್ಲಿ 46 ಅಂಶಗಳಷ್ಟು ಏರಿಕೆ ಪಡೆದು 5,200 ಅಂಶಗಳ ಗಡಿ ದಾಟಿ ದಿನದಂತ್ಯದಲ್ಲಿ 5,204 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.

ಪ್ರತಿಕ್ರಿಯಿಸಿ (+)