ಭಾನುವಾರ, ಮೇ 16, 2021
28 °C

ಸೂಚ್ಯಂಕ: 207 ಅಂಶ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ ಅನಿರೀಕ್ಷಿತವಾಗಿ `ರೆಪೊ~ ದರ ತಗ್ಗಿಸಿದ ಹಿನ್ನೆಲೆಯಲ್ಲಿ, ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕ ಮಂಗಳವಾರದ ವಹಿವಾಟಿನಲ್ಲಿ 207 ಅಂಶಗಳಷ್ಟು ಏರಿಕೆ ಕಂಡಿದೆ.

ಬಿಎಸ್‌ಇ ಸೂಚ್ಯಂಕ ಸೋಮವಾರ 56 ಅಂಶಗಳಷ್ಟು ಚೇತರಿಕೆ ಕಂಡಿತ್ತು. ಮಂಗಳವಾರದ ಏರಿಕೆಯೊಂದಿಗೆ ಒಟ್ಟು 17,357 ಅಂಶಗಳನ್ನು ತಲುಪಿದಂತಾಗಿದೆ.`ರೆಪೊ~ ದರ ತಗ್ಗಿರುವುದರಿಂದ ವಾಹನ, ಗೃಹ ಮತ್ತು ಕಾರ್ಪೊರೇಟ್ ಸಾಲಗಳು ಅಗ್ಗವಾಗಲಿದೆ ಎನ್ನುವ ಸಂಗತಿ ಹೂಡಿಕೆದಾರರಲ್ಲಿ  ಹೊಸ ಉತ್ಸಾಹ ಮೂಡಿಸಿದೆ.  ಇದರಿಂದ ರಿಯಾಲ್ಟಿ ಸೂಚ್ಯಂಕ ಸೋಮವಾರ ಶೇ. 2.41ರಷ್ಟು ಏರಿಕೆ ಕಂಡಿದೆ. ಇನ್ಫೋಸಿಸ್, ಹೀರೊ ಮೋಟೊ ಕಾರ್ಪ್, ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಟಿಸಿ   ಎಸ್, ಎಲ್ ಅಂಡ್ ಟಿ ಕಂಪೆನಿಗಳ ಷೇರುಗಳು  ಲಾಭ ಮಾಡಿಕೊಂಡವು.ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ ದಿನದ ವಹಿವಾಟಿನಲ್ಲಿ 63 ಅಂಶಗಳಷ್ಟು ಏರಿಕೆ ಕಂಡು 5,289 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.