ಸೂಚ್ಯಂಕ: 220 ಅಂಶ ಕುಸಿತ

7

ಸೂಚ್ಯಂಕ: 220 ಅಂಶ ಕುಸಿತ

Published:
Updated:
ಸೂಚ್ಯಂಕ: 220 ಅಂಶ ಕುಸಿತ

ಮುಂಬೈ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಶುಕ್ರವಾರದ ವಹಿವಾಟಿನಲ್ಲಿ  220 ಅಂಶಗಳಷ್ಟು ಕುಸಿತ ಕಂಡು ಮತ್ತೊಮ್ಮೆ 17 ಸಾವಿರದ ಗಡಿ ಇಳಿಯಿತು.ದೇಶದ ಕೈಗಾರಿಕೆ ಉತ್ಪಾದನೆ  (ಐಐಪಿ) ಗಣನೀಯ ಪ್ರಗತಿ ದಾಖಲಿಸಿದರೂ, ಈ ಅಂಶ ಷೇರುಪೇಟೆಗೆ ಬಲ ತುಂಬುವಲ್ಲಿ ವಿಫಲವಾಯಿತು. ದಿನದಂತ್ಯದಲ್ಲಿ ಶೇ 1.29ರಷ್ಟು ಕುಸಿತ ಕಂಡ ಸೂಚ್ಯಂಕ 16,839 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.ಇದರೊಂದಿಗೆ ಕಳೆದ 9 ವಹಿವಾಟು ದಿನಗಳಲ್ಲಿ 8 ಬಾರಿ ಸೂಚ್ಯಂಕ ಕುಸಿತ ಕಂಡಂತಾಗಿದೆ.  ಆಹಾರ ಹಣದುಬ್ಬರ ಎರಡಂಕಿಗೆ ಏರಿರುವ ಹಿನ್ನೆಲೆಯಲ್ಲಿ, ಧಿಡೀರ್ ಬೆಲೆ ಏರಿಕೆ ಭೀತಿಯಿಂದ ಹೂಡಿಕೆದಾರರು ಮಾರಾಟಕ್ಕೆ ಮುಂದಾಗಿದ್ದೇ ಸೂಚ್ಯಂಕ ಕುಸಿಯಲು ಪ್ರಮುಖ ಕಾರಣ. ಈ ಬೆಳವಣಿಗೆಯಿಂದ ಮಾಹಿತಿ ತಂತ್ರಜ್ಞಾನ, ರಿಯಾಲ್ಟಿ,ಬ್ಯಾಂಕಿಂಗ್, ವಿದ್ಯುತ್ ಮತ್ತು ಗಣಿಗಾರಿಕೆ ಕಂಪೆನಿಗಳ ಷೇರುಗಳ ಮಾರಾಟ ಒತ್ತಡ ಕಂಡುಬಂತು.ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ ಶುಕ್ರವಾರದ ವಹಿವಾಟಿನಲ್ಲಿ 65 ಅಂಶಗಳಷ್ಟು ಕುಸಿತ ಕಂಡು 5,072 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry