ಶನಿವಾರ, ಜನವರಿ 25, 2020
19 °C

ಸೂಚ್ಯಂಕ 249ಅಂಶ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ಪತ್ರಿಕೆಗಳಲ್ಲಿ ಗುರು ವಾರ ಪ್ರಕಟಗೊಂಡ ವಿಧಾನಸಭೆ ಚುನಾವಣೆ ಸಮೀಕ್ಷೆಗಳು, ಬಿಜೆಪಿ ಗೆಲುವಿನ ಸಾಧ್ಯತೆ ಬಿಂಬಿಸಿದ್ದು ಮಾರು ಕಟ್ಟೆ ಮೇಲೆ ಪರಿಣಾಮ ಬೀರಿತು.ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 249 ಅಂಶಗಳಷ್ಟು ಏರಿಕೆ ದಾಖಲಿಸಿ ಕಳೆದೊಂದು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿದರೆ, ವಿದೇಶಿ ವಿನಿ ಮಯ ಮಾರುಕಟ್ಟೆಯಲ್ಲಿ ಡಾಲರ್‌ ವಿರುದ್ಧ ರೂಪಾಯಿ 30 ಪೈಸೆಗಳಷ್ಟು ಮೌಲ್ಯ ಹೆಚ್ಚಿಸಿಕೊಂಡಿತು.ವಹಿವಾಟಿನ ಒಂದು ಹಂತದಲ್ಲಿ 457 ಅಂಶಗಳಷ್ಟು ಭಾರಿ ಪ್ರಮಾಣದ ಏರಿಕೆ ದಾಖಲಿಸಿದ್ದ ‘ಬಿಎಸ್‌ಇ’ ಸೂಚ್ಯಂಕ, 20,957.81 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ಇದು ನ. 5ರ ನಂತರ ದಾಖಲಾಗಿರುವ ಗರಿಷ್ಠ ಮಟ್ಟದ ಸೂಚ್ಯಂಕವಾಗಿದೆ.

ಪ್ರತಿಕ್ರಿಯಿಸಿ (+)