ಸೂಚ್ಯಂಕ: 283 ಅಂಶ ಇಳಿಕೆ

7

ಸೂಚ್ಯಂಕ: 283 ಅಂಶ ಇಳಿಕೆ

Published:
Updated:

ಮುಂಬೈ (ಪಿಟಿಐ): ಮಾರಾಟದ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಬುಧವಾರದ ವಹಿವಾಟಿನಲ್ಲಿ 283 ಅಂಶಗಳಷ್ಟು ಕುಸಿತ ಕಂಡಿದೆ.ಯೂರೋಪ್ ಸಾಲದ ಬಿಕ್ಕಟ್ಟು ಮತ್ತು ಅಮೆರಿಕ ಆರ್ಥಿಕತೆಗೆ ಸಂಬಂಧಿಸಿದ ನಕಾರಾತ್ಮಕ ಸಂಗತಿಗಳಿಂದ ಜಾಗತಿಕ ಷೇರುಪೇಟೆಗಳು ಕುಸಿತ ಕಂಡಿವೆ. ಇದರ ನೇರ ಪರಿಣಾಮ ಮುಂಬೈ ಪೇಟೆಯ ಮೇಲೂ ಆಗಿದೆ.ಮಧ್ಯಂತರ ವಹಿವಾಟಿನಲ್ಲಿ ಕಳೆದ ಏಳು ತಿಂಗಳಲ್ಲೇ ಗರಿಷ್ಠ ಮಟ್ಟ 18,523 ಅಂಶಗಳಿಗೆ ಏರಿಕೆ ಪಡೆದ ಸೂಚ್ಯಂಕ, ದಿನದಂತ್ಯಕ್ಕೆ 18,145 ಅಂಶಗಳಿಗೆ ಇಳಿಕೆ ಕಂಡಿತು. ದಿನದ ವಹಿವಾಟಿನಲ್ಲಿ ರಿಯಾಲ್ಟಿ, ಗ್ರಾಹಕ ಸರಕು, ಬ್ಯಾಂಕಿಂಗ್ ಮತ್ತು ಇಂಧನ ವಲಯದ ಷೇರುಗಳು ನಷ್ಟಕ್ಕೊಳಗಾದವು.ಎಸ್‌ಬಿಐಗೆ ಭಾರಿ ನಷ್ಟ: ಆರ್ಥಿಕ ಮುಗ್ಗಟ್ಟು  ಎದುರಿಸುತ್ತಿರುವ ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ್ಙ1,200 ಕೋಟಿ ಸಾಲದ ನೆರವು ನೀಡಲು `ಎಸ್‌ಬಿಐ~ ಬದ್ಧವಾಗಿದೆ ಎನ್ನುವ ಸುದ್ಧಿಯಿಂದ ಬುಧವಾರದ ವಹಿವಾಟಿನಲ್ಲಿ `ಎಸ್‌ಬಿಐ~ ಷೇರುಗಳು ಶೇ 7.91ರಷ್ಟು ಕುಸಿತ ಕಂಡವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry