ಸೋಮವಾರ, ಮೇ 23, 2022
21 °C

ಸೂಚ್ಯಂಕ 421ಅಂಶ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಇನ್ಫೋಸಿಸ್‌ನ ಎರಡನೆಯ ತ್ರೈಮಾಸಿಕ ಅವಧಿಯ ಹಣಕಾಸು ಸಾಧನೆಯು ಮಾರುಕಟ್ಟೆ ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ಇದ್ದ ಕಾರಣ, ಬುಧವಾರ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 421 ಅಂಶಗಳಷ್ಟು ಏರಿಕೆ ಕಂಡು, ಕಳೆದ ನಾಲ್ಕು ವಾರಗಳಲ್ಲೇ ಗರಿಷ್ಠ ಮಟ್ಟ 16,958 ಅಂಶಗಳಿಗೆ ಜಿಗಿಯಿತು. ಜಾಗತಿಕ ಆರ್ಥಿಕ ಅಸ್ಥಿರತೆ ಮಧ್ಯೆ, ಚೇತರಿಕೆಗಾಗಿ ಕಾರ್ಪೊರೇಟ್ ಫಲಿತಾಂಶದತ್ತ ಕಣ್ಣು ನೆಟ್ಟು ಕುಳಿತ್ತಿದ್ದ ಷೇರುಪೇಟೆಗೆ ಇನ್ಫೋಸಿಸ್ ಹಣಕಾಸು ಸಾಧನೆ ಬಲ ತುಂಬಿತು. ದಿನದ ವಹಿವಾಟಿನಲ್ಲಿ ಇನ್ಫೋಸಿಸ್ ಷೇರುಗಳು ಶೇ 6.83ರಷ್ಟು ಏರಿಕೆ ಕಂಡವು. ಮಾಹಿತಿ ತಂತ್ರಜ್ಞಾನ ಸೇರಿದಂತೆ ರಿಯಲ್‌ಎಸ್ಟೇಟ್ ಮತ್ತು ಬ್ಯಾಂಕಿಂಗ್ ವಲಯದ ಷೇರುಗಳು ಲಾಭಮಾಡಿಕೊಂಡವು.ಆಗಸ್ಟ್ ತಿಂಗಳ ದೇಶದ ಕೈಗಾರಿಕೆ ಪ್ರಗತಿ ದುರ್ಬಲವಾಗಿದ್ದರೂ ಈ ಸಂಗತಿ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಲಿಲ್ಲ. ಬದಲಿಗೆ ಐಟಿ, ಬ್ಯಾಂಕಿಂಗ್, ರಿಯಾಲ್ಟಿ ಮತ್ತು ಖನಿಜ ಉದ್ಯಮಗಳ ಷೇರುಗಳ ಖರೀದಿ ಒತ್ತಡ ಕಂಡುಬಂತು.ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕೂಡ ಬುಧವಾರ ವಹಿವಾಟಿನಲ್ಲಿ 125 ಅಂಶಗಳಷ್ಟು ಏರಿಕೆ ದಾಖಲಿಸಿ, 5,099 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು. ಇದು ನಾಲ್ಕು ವಾರಗಳ ನಂತರ ದಾಖಲಾದ ಗರಿಷ್ಠ ಮಟ್ಟವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.