ಶುಕ್ರವಾರ, ನವೆಂಬರ್ 22, 2019
26 °C

ಸೂಚ್ಯಂಕ 7 ತಿಂಗಳ ಹಿಂದಿನ ಮಟ್ಟಕ್ಕೆ

Published:
Updated:

ಮುಂಬೈ (ಪಿಟಿಐ): ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕವು ಮಂಗಳವಾರದ ವಹಿವಾಟಿನಲ್ಲಿ 211 ಅಂಶಗಳಷ್ಟು ಕುಸಿತ ಕಂಡಿದ್ದು 7 ತಿಂಗಳ ಹಿಂದಿನ ಮಟ್ಟವಾದ 18,226 ಅಂಶಗಳಿಗೆ ಇಳಿಕೆ ಕಂಡಿದೆ.ವಿಪ್ರೊ ರೂ.11,882 ಕೋಟಿ ನಷ್ಟ

ವಿಪ್ರೊ ಕಂಪೆನಿ ತನ್ನ ಐ.ಟಿಯೇತರ ಮೂರು ವಿಭಾಗಗಳನ್ನು `ವಿಪ್ರೊ ಎಂಟರ್‌ಪ್ರೈಸಸ್' ಹೆಸರಿನಡಿ  ಪ್ರತ್ಯೇಕಿಸಿದೆ. ಇದರಿಂದ ಕಂಪೆನಿಯ ಷೇರು ಮೌಲ್ಯ ಮಂಗಳವಾರ `ಬಿಎಸ್‌ಇ'ಯಲ್ಲಿ ಶೇ 12ರಷ್ಟು ಕುಸಿತ ಕಂಡುರೂ.397ಕ್ಕೆ ಕುಸಿಯಿತು. ಒಂದೇ ದಿನದಲ್ಲಿ ಕಂಪೆನಿಯ ಮಾರುಕಟ್ಟೆ ಮೌಲ್ಯರೂ.11,882 ಕೋಟಿಯಷ್ಟು ಕುಸಿದುರೂ.98,551 ಕೋಟಿಗೆ ಇಳಿಯಿತು.ಐ.ಟಿ ಸೇವಾ ವಲಯಕ್ಕೆ ಆದ್ಯತೆ ನೀಡಲು ಕಂಪೆನಿ, ಐ.ಟಿಯೇತರ ವಹಿವಾಟು ವಿಭಾಗಗಳಾದ ವಿಪ್ರೊ ಕಂಜ್ಯೂಮರ್ ಕೇರ್, ಇನ್‌ಫ್ರಾಸ್ಟ್ರಕ್ಚರ್, ಮತ್ತು ಮೆಡಿಕಲ್ ಘಟಕಗಳನ್ನು `ವಿಪ್ರೊ ಎಂಟರ್‌ಪ್ರೈಸಸ್ ಲಿಮಿಟೆಡ್' ಎಂದು ಪ್ರತ್ಯೇಕಿಸಿದೆ.  ಕಳೆದ ನವೆಂಬರ್‌ನಲ್ಲಿಯೇ ಕಂಪೆನಿಯ ಆಡಳಿತ ಮಂಡಳಿ ಇದಕ್ಕೆ ಒಪ್ಪಿಗೆ ನೀಡಿತ್ತು. ಮಾರ್ಚ್ 31ರಿಂದ ಇದು ಜಾರಿಗೆ ಬಂದಿದೆ.

ಪ್ರತಿಕ್ರಿಯಿಸಿ (+)