ಬುಧವಾರ, ಜೂನ್ 16, 2021
28 °C

ಸೂಚ್ಯಂಕ 93 ಅಂಶ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಅಮೆರಿಕದ ಫೆಡ­ರಲ್‌ ರಿಸರ್ವ್‌ 2015ರ ಮಧ್ಯದಿಂದ ಆರ್ಥಿಕ ಉತ್ತೇ­ಜನ ಕೊಡುಗೆಗಳನ್ನು ಕಡಿತಗೊಳಿಸಿ, ಬಡ್ಡಿ ದರ ಏರಿಕೆ ಮಾಡಲು ನಿರ್ಧಾರ ತೆಗೆದುಕೊಂಡ ಹಿನ್ನೆಲೆಯಲ್ಲಿ ಗುರು­ವಾರ ಜಾಗತಿಕ ಷೇರುಪೇಟೆಗಳಲ್ಲಿ ಕುಸಿತ ಕಂಡು­ಬಂದಿದೆ.ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕವೂ (ಬಿಎಸ್‌ಇ) 93 ಅಂಶ­ಗಳಷ್ಟು ಕುಸಿದಿದ್ದು, ಎರಡು ವಾರಗಳ ಹಿಂದಿನ ಮಟ್ಟವಾದ 21,740 ಅಂಶಗಳಿಗೆ ಜಾರಿದೆ.  ಮಾ. 6 ರ ನಂತರ ದಾಖಲಾ­ಗಿರುವ ಕನಿಷ್ಠ ಮಟ್ಟ ಇದಾಗಿದೆ. ರಾಷ್ಟ್ರೀಯ ಷೇರು ಸೂಚ್ಯಂಕ ‘ನಿಫ್ಟಿ’ 41 ಅಂಶಗಳಷ್ಟು ಕುಸಿದಿದ್ದು 6,483 ಅಂಶಗಳಲ್ಲಿ ವಹಿವಾಟು ಕೊನೆಗೊ­ಳಿಸಿದೆ.ಚೀನಾದ ಆರ್ಥಿಕ ವೃದ್ಧಿ ದರ ಕುಸಿದಿರುವುದೂ ಏಷ್ಯಾದ ಷೇರು­ಪೇಟೆಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರಿದೆ.  ರಿಯಲ್‌ ಎಸ್ಟೇಟ್‌, ಭಾರಿ ಯಂತ್ರೋಪಕರಣಗಳ ವಲಯ, ಬ್ಯಾಂಕಿಂಗ್‌ ವಲಯದ ಷೇರುಗಳು ದಿನದ ವಹಿವಾಟಿನಲ್ಲಿ ನಷ್ಟ ಅನುಭವಿ­ಸಿದವು. ಐ.ಟಿ, ಔಷಧ ಉದ್ಯಮಗಳ ಷೇರುಗಳು ಲಾಭ ಮಾಡಿಕೊಂಡವು.ರೂಪಾಯಿ ಅಪಮೌಲ್ಯ

ಡಾಲರ್‌ ವಿರದ್ಧ ರೂಪಾಯಿ ವಿನಿಮಯ ಮೌಲ್ಯ ಗುರುವಾರ 39 ಪೈಸೆಗಳಷ್ಟು ಕುಸಿದಿದ್ದು, 2 ತಿಂಗಳ ಹಿಂದಿನ ಮಟ್ಟವಾದ ₨61.34ಕ್ಕೆ ಜಾರಿದೆ.

ಫೆಡರಲ್‌ ರಿಸರ್ವ್‌ ಕ್ರಮದಿಂದ ಹಣಕಾಸು ಮಾರುಕಟ್ಟೆಯಲ್ಲಿ ಅಸ್ಥಿರತೆ ಮೂಡಿರುವುದೇ ರೂಪಾಯಿ ವಿನಿ­ಮಯ ಮೌಲ್ಯ ಕುಸಿಯಲು ಪ್ರಮುಖ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.