ಭಾನುವಾರ, ಡಿಸೆಂಬರ್ 8, 2019
20 °C

ಸೂಚ್ಯಂಕ:371 ಅಂಶ ಕುಸಿತ

Published:
Updated:
ಸೂಚ್ಯಂಕ:371 ಅಂಶ ಕುಸಿತ

ಮುಂಬೈ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಸೋಮವಾರದ ವಹಿವಾಟಿನಲ್ಲಿ   ಮಾರುಕಟ್ಟೆಯ ಎಲ್ಲ ಲೆಕ್ಕಚಾರಗಳನ್ನು ತಲೆಕೆಳಗೆ ಮಾಡಿ 371 ಅಂಶಗಳಷ್ಟು ಇಳಿಕೆ ಕಂಡಿದೆ.

ಜಾಗತಿಕ ಷೇರುಪೇಟೆಗಳಲ್ಲಿ ದಾಖಲಾದ  ನೀರಸ ವಹಿವಾಟು ಮುಂಬೈ ಪೇಟೆಯ ಮೇಲೂ ನೇರವಾಗಿ ಪ್ರತಿಫಲಿಸಿತು. ಇದರಿಂದ ಜನವರಿ 27 ರಿಂದ ಏರಿಕೆಯ  ಹಾದಿಯಲ್ಲಿದ್ದ ಸೂಚ್ಯಂಕ ಮತ್ತೊಮ್ಮೆ  ರೂ. 17 ಸಾವಿರದ ಗಡಿ ಇಳಿದಿದೆ. ದಿನದಂತ್ಯಕ್ಕೆ 16,863 ಅಂಶಗಳಿಗೆ ವಹಿವಾಟು ಕೊನೆಗೊಂಡಿತು.

ಜನವರಿ 1ರಿಂದ 27ರವರೆಗೆ ಸೂಚ್ಯಂಕ ಶೇ 12ರಷ್ಟು ಏರಿಕೆ ಕಂಡಿದ್ದು, ಹೂಡಿಕೆದಾರರ ಸಂಪತ್ತು  7 ಲಕ್ಷ ಕೋಟಿಗಳಷ್ಟು ವೃದ್ಧಿಸಿತ್ತು. ಕಳೆದ ಒಂದು ವಾರದಲ್ಲೇ  ಸೂಚ್ಯಂಕ ಶೇ 3ರಷ್ಟು ಏರಿಕೆ ಕಂಡಿತ್ತು. ವಹಿವಾಟಿನ ಲಾಭ ಪಡೆಯಲು ಹೂಡಿಕೆದಾರರು ದೊಡ್ಡ ಪ್ರಮಾಣದಲ್ಲಿ ಖರೀದಿ ಮತ್ತು ಮಾರಾಟ ಚಟುವಟಿಕೆಗೆ ಮುಂದಾಗಿದ್ದರು.

ತ್ರೈಮಾಸಿಕ ಹಣಕಾಸು ಸಾಧನೆ ಕುಸಿದ ಹಿನ್ನೆಲೆಯಲ್ಲಿ `ಬಿಎಚ್‌ಇಎಲ್~ ಷೇರು ದರಗಳು ಮಂಗಳವಾರ ಶೇ 10ರಷ್ಟು ಇಳಿಕೆ ಕಂಡವು. ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ 117 ಅಂಶಗಳಷ್ಟು ಕುಸಿತ ಕಂಡು 5,087 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.ಜಾಗತಿಕ ಷೇರು ಪೇಟೆಗಳಲ್ಲಿ ಸೋಮವಾರ ನೀರಸ ವಹಿವಾಟು ದಾಖಲಾಗಿದೆ. ಯೂರೋಪ್ ಷೇರು ಸೂಚ್ಯಂಕ ಮಧ್ಯಾಹ್ನದ ನಂತರದ ವಹಿವಾಟಿನಲ್ಲಿ ತೀವ್ರ ಹಾನಿಗೊಳಗಾಗಿದೆ.

ಪ್ರತಿಕ್ರಿಯಿಸಿ (+)